ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶರಾದರು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ವಕೀಲರ ವಿಶ್ವಾಸ ಗಳಿಸಿರುವ ಇವರು ಮುಂದೊಂದು ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗುತ್ತಾರೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಅರವಿಂದರವರು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಕೀಲರ ಸಭಾಂಗಣದಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರಾದ ಪವಿತ್ರ ರವರು ಮತ್ತು ಅವರ ಪತಿ ವಕೀಲ ಕಿರಣ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಅತ್ಯಂತ ಅನುಭವಿಯಾಗಿದ್ದು ಇತರ ನ್ಯಾಯಾಧೀಶರಿಗೂ ಸಹಕಾರ ಕೊಡುವ ಜೊತೆಗೆ ವಕೀಲರಿಗೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಅವರಿಗೆನೀಡಿದ ಸಹಕಾರವನ್ನು ಮುಂದೆ ಬರುವ ನ್ಯಾಯಾಧೀಶರು ಹಾಗೂ ನನಗೂ ನೀಡುವಂತೆ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರಾದ ಪವಿತ್ರ ರವರು ಅತ್ಯಂತ ಹಿರಿಯ ವಕೀಲರುಗಳು ಇರುವ ಈ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿರುವುದು ನನಗೆ ಹೆಮ್ಮೆಯ ವಿಷಯವಾದರೂ ನನ್ನನ್ನು ಇಷ್ಟೊಂದು ಪ್ರೀತಿ ವಿಶ್ವಾಸದಿಂದ ಗೌರವಿಸುತ್ತಿರುವ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ ವಕೀಲರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು ಇಲ್ಲಿ ಯಾವ ವಕೀಲರು ಇಲ್ಲಿಯ ತನಕ ಒಬ್ಬರು ನ್ಯಾಯಾಧೀಶರಾಗದಿರುವುದು ನೋವುಂಟಾಗಿದೆ ಮುಂದಿನ ದಿನಗಳಲ್ಲಿ ನಿಮ್ಮ ಸಂಘದ ವತಿಯಿಂದ ಒಬ್ಬರಾದರೂ ನ್ಯಾಯಾಧೀಶರಾಗುವಂತೆ ಪ್ರೇರೇಪಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ದಿಲೀಪ್ ಮಾತನಾಡಿ ನ್ಯಾಯಾಧೀಶರಾದ ಪವಿತ್ರ ರವರು ನಮ್ಮ ನ್ಯಾಯಾಲಯಕ್ಕೆ ಬಂದ ವೇಳೆಯಲ್ಲಿ ಪ್ರಾರಂಭವಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಹಾಗೂ ಅವರು ತಾಲೂಕಿನ ೩೪ ಗ್ರಾಮ ಪಂಚಾಯಿತಿಯ ೧೩೫ ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ಮೂಲಕ ಜನರಿಗೆ ಅರಿವು ಮೂಡಿಸಿದಂತ ಕಿರೀಟಕ್ಕೆ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ವರ್ಣಿಸಿದರು.
ತಾಲೂಕಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಜನರಿಗೆ ಪರಿಚಯವಿರುತ್ತಾರೆ ಆದರೆ ನ್ಯಾಯಾಧೀಶರೊಬ್ಬರು ಜನಸಾಮಾನ್ಯರಿಗೆ ಪರಿಚಿತರಾಗಿದ್ದು ಇದೇ ಮೊದಲಾಗಿದೆ ಹಾಗೂ ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿಕಾನೂನಿನ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಕೇವಲ ಕಾನೂನು ಅರಿವು ನೆರವು ಕಾರ್ಯಕ್ರಮಗಳಲ್ಲದೆ ವಕೀಲರ ಜೊತೆ ಅತ್ಯಂತ ವಿಶ್ವಾಸದಿಂದ ನಡೆದುಕೊಳ್ಳುವುದಲ್ಲದೆ ಹಿರಿಯ ವಕೀಲರನ್ನು ಅತ್ಯಂತ ಗೌರವದಿಂದ ನೋಡುತ್ತಿದ್ದರು ಮತ್ತು ನಮ್ಮ ಸಂಘದ ವಿಚಾರದಲ್ಲಿ ಇಬ್ಬರನ್ನು ಕರೆಸಿ ಸಲಹೆ ಸೂಚನೆಗಳನ್ನು ನೀಡುವುದು ಹಾಗೂ ಕೋವಿಡ್ ನ ಸಂದರ್ಭದಲ್ಲಿಯೂ ವಕೀಲರಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಉತ್ತಮವಾಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು ಎಂದು ತಿಳಿಸಿದರು. ಕೇವಲ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸದೆ ಮನುವಿತೆಯಿಂದಲೂ ಕರ್ತವ್ಯ ನಿರ್ವಹಿಸಿ ನ್ಯಾಯಾಲಯಕ್ಕೆ ಬಂದ ಕಕ್ಷೆದಾರರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡುವ ಜೊತೆಗೆ ರಾಜಿ ಸಂಧಾನವನ್ನು ಮಾಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು ಇಂಥವರ ವರ್ಗಾವಣೆ ದುಃಖಕರವಾಗಿದ್ದರು ಕಾನೂನು ಪ್ರಕ್ರಿಯೆಗೆ ಎಲ್ಲರೂ ತಲಬಾಗಬೇಕಾಗಿರುವುದರಿಂದ ಅವರನ್ನು ಬಿಳ್ಕೊಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸವನ್ನು ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವಕೀಲಾ ಅಂಕನಹಳ್ಳಿ ತಿಮ್ಮಪ್ಪ ಕೃಷ್ಣರಾಜ ಅರಸ್ ಜಿ ಆರ್ ರಾಮೇಗೌಡ ಮಹದೇವಪ್ಪ ರುದ್ರಮೂರ್ತಿ ಗೋವಿಂದರಾಜು ಶರತ್ ಚಂದ್ರ ಅರಸ್ ವೇದಾವತಿ ಮಾತನಾಡಿದರು ವೇದಿಕೆಯಲ್ಲಿ ನ್ಯಾಯಾಧೀಶರಪತಿ ಕಿರಣ್ ಧರ್ಮ ಶಿವಶಂಕರ್ ಧನಲಕ್ಷ್ಮಿ ಮಧುನಹಳ್ಳಿ ಶಿವರಾಜ್ ಮಹೇಶ್ ಪರಮೇಶ್ ವೀರಭದ್ರಪ್ಪ ಕೆಂಪನಕೊಪ್ಪಲು ದಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.