ಮಂಡ್ಯ: ಕೆಆರ್ ಎಸ್ ಡ್ಯಾಂ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ತೀವ್ರ ವಿರೋಧ ಹಿನ್ನಲೆ ಸಚಿವ ಚಲುವರಾಯಸ್ವಾಮಿ ರೈತ ಮುಖಂಡರ ತುರ್ತು ಸಭೆ ಕರೆದಿದ್ದಾರೆ.
ಮಂಡ್ಯದ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಈಗಾಗಲೇ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಗೆ ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಕೆಆರ್ ಎಸ್ ಡ್ಯಾಂ ಗೆ ಅಪಾಯ ಹಿನ್ನಲೆ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು.