ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕಿನ ಪೀಪಲ್ ಟ್ರೀ ಸಂಸ್ಥೆ ಮತ್ತು ಗ್ರಾಮ ಪಂಚಾಯತಿಗಳ ಸಹಯೋಗದೊಂದಿಗೆ ಮಾದರಿ ಪಂಚಾಯತಿಗಳ ಅದ್ಯಯನ ಪ್ರವಾಸವನ್ನು ಏರ್ಪಡಿಸಲಾಯಿತು.
ಕರ್ನಾಟಕ ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಯಲಹಂಕ ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯತಿ ಗೆ ಹೆಚ್.ಡಿ.ಕೋಟೆ ಭಾಗಗಳಿಂದ 12 ಗ್ರಾಮ ಪಂಚಾಯತಿ ಗಳ ಜನಪ್ರತಿನಿದಿಗಳು, ಪಂಚಾಯತಿ ಯ ಕಾರ್ಯದರ್ಶಿಗಳು, ಮತ್ತು ಅದ್ಯಕ್ಷರು ಹಾಗೂ ಉಪಾಧ್ಯಕ್ಷರು, ಲೆಕ್ಕಪರಿಶೋಧಕರು ಬೇಟಿ ನೀಡಿ ಮಾದರಿಯ ಬೇಟಿ ನೀಡಿದರು.

ಜೊತೆಗೆ ಕೆರೆಗಳ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಘನ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ, ಕೆರೆಗಳು ಮತ್ತು ಸರ್ಕಾರಿ ಜಾಗಗಳಲ್ಲಿ ಶಾಲಾ ಮಕ್ಕಳಿಂದ ನರ್ಸರಿ ನಿರ್ಮಿಸಿ ಗಿಡಗಳನ್ನು ಹಾಕಿಸಿರುವುದು ಮತ್ತು ಅವುಗಳ ನಿರ್ವಹಣೆ ಜವಾಬ್ದಾರಿ ನ್ನು ಪಂಚಾಯತಿ ತಂಡವು ಸಮುದಾಯದ ಬೆಂಬಲದೊಂದಿಗೆ ನಿರ್ವಹಣೆ ಮಾಡುತ್ತಿದೆ.
ಪಂಚಾಯತಿ ಯು ಸರ್ಕಾರದ ವತಿಯಿಂದ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಆ ಜಾಗದಲ್ಲಿ ಜೀವ ವೈವಿಧ್ಯತೆ ಸಮಿತಿಗಳ ಮೂಲಕ ಔಷಧಿ ವನ, ನಮ್ಮ ಜನಪದ ಸಂಸ್ಕ್ರತಿ, ಸಮುದಾಯದ ಸಭೆ ಮಾಡಲು ಪ್ರತ್ಯೇಕ ಸಬಾಂಗಣ, ಕೃಷಿ ತ್ಯಾಜ್ಯ ಗಳಿಂದ ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕುಡಿಯುವ ನೀರಿನ ನಿರ್ವಹಣೆ, ಇ ಸ್ವತ್ತು ಅದಾಲತ್ತುಗಳ ಕುರಿತು ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ತಮ್ಮ ಗ್ರಾಮಗಳಲ್ಲು ಸಮುದಾಯದ ಸಹಭಾಗಿತ್ವ ದೊಂದಿಗೆ ಅಭಿವೃದ್ಧಿಪಡಿಸಿದ್ದೇವೆ ಎಂದು ಅರಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಮ್ಮೇಗೌಡರು ತಿಳಿಸಿದರು .

ನಮ್ಮ ತಂಡದಿಂದ ಅವರಿದೆ ಅಭಿನಂದಿಸುವುದರೊಂದಿಗೆ ಸ್ಥಳೀಯ ದೇಶಿ ತಳಿ ಬಿತ್ತನೆ ಬೀಜ ಸಂರಕ್ಷಣಾ ವಿಚಾರ ವಾಗಿ ಪಂಚಾಯ್ತಿ ಮಟ್ಟದಲ್ಲಿ ಒಂದು ಬೀಜ ಬ್ಯಾಂಕ್ ಸ್ಥಾಪನೆ ಮಾಡಲು ಸಲಹೆ ನೀಡಲಾಯಿತು.
ಪ್ರವಾಸದ ತಂಡದೊಂದಿಗೆ ಸಂಸ್ಥೆಯ ಮುಖಂಡರಾದ ಜವರೇಗೌಡ ಚೆನ್ನಕೇಶವ ಸುರೇಶ್ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಉಪಾಧ್ಯಕ್ಷರು ಗ್ರಾಮ ಪಂಚಾಯತಿಯ ಸದಸ್ಯರು ಭಾಗವಹಿಸಿದ್ದರು.