ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದ ಅಲ್ಪಸಂಖ್ಯಾತ ಮುಖಂಡ ಸುಭಾನ್ ಉಲ್ಲಾ ಅವರನ್ನು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅವರು ಆದೇಶ ಪತ್ರ ನೀಡಿ ಮಾತನಾಡಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡುವಂತೆ ಶುಭ ಕೋರಿದ್ದಾರೆ.
ಸುಭಾನ್ ಉಲ್ಲಾ ಅವರು ಮಾತನಾಡಿ ಪಕ್ಷ ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಾದ ನಾಸೀರ್ ಪಾಶ, ಸೈಯದ್ ಇನಾಯತ್, ಕಾಶೀಪ್ ಖಾನ್, ಮಜಹರ್ ಪಾಶ, ಅಮ್ಜದ್ ಪಾಶ, ಜಬಿ ಉಲ್ಲಾ, ಶೇಕ್ ಮುಜಸಿಮ್, ಫೈಜ್, ಮುಬಾರಕ್ ಷರೀಫ್, ಮಹಮ್ಮದ್ ಆಲಂ, ರೂಮನ್ ಪಾಶ ಸೇರಿದಂತೆ ಹಲವರು ಸುಭಾನ್ ಉಲ್ಲಾ ರವರಿಗೆ ಶುಭಕೋರಿದರು.
