ರೈಲ್ವೆ ಮೂಲಸೌಕರ್ಯವನ್ನು ವೃದ್ಧಿಗೊಳಿಸುವ ಮತ್ತು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಭಾಗವಾಗಿ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಘಾಟ್ ವಿಭಾಗದ ರೈಲ್ವೆ ಮಾರ್ಗವನ್ನು ಯಶಸ್ವಿಯಾಗಿ ವಿದ್ಯುದೀಕರಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯಂತ ಸವಾಲಿನ ಭೂಪ್ರದೇಶದಲ್ಲಿ ಸಾಧಿಸಿದ ಈ ಮೈಲಿಗಲ್ಲು ಆಧುನಿಕ ಮತ್ತು ಶುದ್ಧ-ಶಕ್ತಿ ಮೂಲಸೌಕರ್ಯ ನಿರ್ಮಾಣದೆಡೆಗಿನ ಭಾರತೀಯ ರೈಲ್ವೆಯ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಇದೀಗ, ಈ ರೈಲ್ವೆ ಮಾರ್ಗವು ವಿದ್ಯುತ್ ಚಾಲನೆಗೆ ಸಂಪೂರ್ಣವಾಗಿ ಸಿದ್ದಗೊಂಡಿದ್ದು, ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಈ ಭಾಗದಲ್ಲಿ ಮತ್ತಷ್ಟು ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ಸಹಾಯಕವಾಗಲಿದೆ ಎಂದಿದ್ದಾರೆ.



