Wednesday, May 21, 2025
Google search engine

Homeಅಪರಾಧಮೈಸೂರು ಕಾರಾಗೃಹಕ್ಕೆ ದಿಢೀರ್ ದಾಳಿ: ಜೈಲಿನಲ್ಲಿ ಚಾಕು ಪತ್ತೆ

ಮೈಸೂರು ಕಾರಾಗೃಹಕ್ಕೆ ದಿಢೀರ್ ದಾಳಿ: ಜೈಲಿನಲ್ಲಿ ಚಾಕು ಪತ್ತೆ

ಮೈಸೂರು : ಮೈಸೂರು ಕೇಂದ್ರ ಕಾರಾಗೃಹಕ್ಕೆ ನಗರದ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ತಪಾಸಣೆ ವೇಳೆ ಚಾಕು, ಮೊಬೈಲ್ ಚಾರ್ಜರ್, ನಗದು ಹಣ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಈ ದಾಳಿ ನಡೆದಿದ್ದು, ನಗರ ಘಟಕದ ಪೊಲೀಸರು ಶ್ವಾನದಳದೊಂದಿಗೆ ಬಂದಿಗಳ ಬ್ಯಾರಕ್‌ಗಳು ಮತ್ತು ಕಾರಾಗೃಹದ ಒಳಭಾಗದಲ್ಲಿ ತಪಾಸಣೆ ನಡೆಸಿದರು.

ತಪಾಸಣೆ ವೇಳೆ ಚಾಕು, ನಗದು ಹಣ, ಮೊಬೈಲ್ ಚಾರ್ಜರ್‌ಗಳು ಪತ್ತೆಯಾಗಿದ್ದು ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಮುತ್ತುರಾಜು ತಿಳಿಸಿದ್ದಾರೆ. ತಪಾಸಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು ಎಂ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ, ವಿವಿಧ ವಿಭಾಗದ ಎಸಿಪಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಇತರೆ ಪೊಲೀಸ್ ಅಧಿಕಾರಿಗಳು, ಕಮಾಂಡೋ ಪಡೆ ಮತ್ತು ಶ್ವಾನ ದಳದವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular