Saturday, November 8, 2025
Google search engine

Homeರಾಜಕೀಯರೈತರ ಪ್ರತಿಭಟನೆಗೂ ಮುನ್ನ ಕಬ್ಬಿನ ದರ ನಿಗದಿ ಮಾಡಬೇಕಿತ್ತು- ವಿ.ಸೋಮಣ್ಣ ಟೀಕೆ

ರೈತರ ಪ್ರತಿಭಟನೆಗೂ ಮುನ್ನ ಕಬ್ಬಿನ ದರ ನಿಗದಿ ಮಾಡಬೇಕಿತ್ತು- ವಿ.ಸೋಮಣ್ಣ ಟೀಕೆ

ನವದೆಹಲಿ: ಪ್ರತಿ ಟನ್ ಕಬ್ಬಿಗೆ 3,300 ರೂ ದರ ನಿಗದಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ , ಈ ಕೆಲಸವನ್ನ ಸಿಎಂ ಸಿದ್ದರಾಮಯ್ಯ ಮೊದಲೇ ಮಾಡಬೇಕಿತ್ತು ಎಂದು ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ರೈತರ ಪ್ರತಿಭಟನೆಗೂ ಮುನ್ನ ಕಬ್ಬಿನ ದರ ನಿಗದಿ ಮಾಡಬೇಕಿತ್ತು. ಇಚ್ಚಾಶಕ್ತಿ ಕೊರತೆ ಎಷ್ಟಿದೆ ಎಂದು ಇದರಿಂದ ಗೊತ್ತಾಗುತ್ತೆ. ರೈತರಿಗೆ ಅನಗತ್ಯ ತೊಂದರೆ ಕೊಡುವ ಮೊದಲೇ  ಕಬ್ಬಿನ ದರ ನಿಗದಿಪಡಿಸಬಹುದಿತ್ತು.  ಇತರೆ ಉತ್ಪನ್ನಗಳಿಂದ ಬರುವ ಆದಾಯವನ್ನ ರೈತರಿಗೆ ಕೊಡಬೇಕು . ಸಕ್ಕರೆ ಮಾಲೀಕರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು.  ಕೇಂದ್ರ ಸರ್ಕಾರ, ಪ್ರಧಾನಿ ಕಡೆಗೆ ಬೊಟ್ಟು ಮಾಡುವುದನ್ನ ನಿಲ್ಲಿಸಬೇಕು. ಸರ್ಕಾರ ಏನು ಮಾಡಬಹುದೋ ಅದನ್ನ ಮೊದಲು ಮಾಡಲಿ. ಆ ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ  ಎಂದರು.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೊತೆ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಕೇಂದ್ರದ ಪರವಾಗಿ ರಾಷ್ಟ್ರಪತಿಗಳ ಜೊತೆ ಪ್ರವಾಸಕ್ಕೆ ತೆರಳುತ್ತಿದ್ದೇನೆ ಎಂದರು.

RELATED ARTICLES
- Advertisment -
Google search engine

Most Popular