Saturday, June 20, 2026
Google search engine

Homeರಾಜ್ಯಸುದ್ದಿಜಾಲಬಾಗಲಕೋಟೆ: ಜೋಡೆತ್ತಿನ ಸಾಹಸಕ್ಕೆ ಸುರಳಿಕಲ್ಲ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

ಬಾಗಲಕೋಟೆ: ಜೋಡೆತ್ತಿನ ಸಾಹಸಕ್ಕೆ ಸುರಳಿಕಲ್ಲ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಸುರಳಿಕಲ್ಲ ಗ್ರಾಮದಲ್ಲಿ ಜೋಡೆತ್ತಿನ ಅಪರೂಪದ ಸಾಧನೆಗೆ ಗ್ರಾಮಸ್ಥರು, ಯುವಕರು ಹಾಗೂ ತಾಯಂದಿರು ಅದ್ದೂರಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು. ರೈತರ ಮುಖದಲ್ಲಿ ಸಂತಸ ಮೂಡಿಸಿದ ಈ ಸಾಧನೆ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.

ಸುರಳಿಕಲ್ಲ ಗ್ರಾಮದ ರೈತ ಶಿವಬಸಪ್ಪ ಆಸಂಗಿ ಅವರ ಜಮೀನಿನಲ್ಲಿ ಎರಡು ಜೋಡೆತ್ತುಗಳು ಕೇವಲ ಆರು ತಾಸುಗಳಲ್ಲಿ ಸುಮಾರು 6 ಎಕರೆ 30 ಗುಂಟೆ ಭೂಮಿಯನ್ನು ಉಳುಮೆ ಮಾಡಿ ದಾಖಲೆ ನಿರ್ಮಿಸಿವೆ. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಉಳುಮೆ ಮಧ್ಯಾಹ್ನ 12 ಗಂಟೆಗೆ ಪೂರ್ಣಗೊಂಡಿದೆ. ಜೋಡೆತ್ತಿನ ಶಕ್ತಿ, ವೇಗ ಹಾಗೂ ರೈತರ ಪರಿಶ್ರಮಕ್ಕೆ ಸಾಕ್ಷಿಯಾದ ಈ ಸಾಧನೆಗೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಐತಿಹಾಸಿಕ ಕ್ಷಣವನ್ನು ಗ್ರಾಮಸ್ಥರು ಹಬ್ಬದ ವಾತಾವರಣದಲ್ಲಿ ಆಚರಿಸಿ, ಸಾಧನೆ ಮಾಡಿದ ರೈತನನ್ನು ಗೌರವಿಸಿದರು.

RELATED ARTICLES
- Advertisment -
Google search engine

Most Popular