ಗಾಂಧಿನಗರ: ಮಾಡೆಲ್ ಒಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಸೂರತ್‌ನಲ್ಲಿರುವ ಮನೆಯಲ್ಲಿ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೋರಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ ಕಳೆದ ಹಲವಾರು ವರ್ಷಗಳಿಂದ ಫ್ರೀಲ್ಯಾನ್ಸ್ ಮಾಡೆಲ್ ಮಾಡುತ್ತಿದ್ದಳು. ಅಂಜಲಿ ಆತ್ಮಹತ್ಯೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜಾರ್, ಮಾಡೆಲ್ ಅಂಜಲಿ ಸೂರತ್‌ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂಜಲಿ, ಫ್ಯಾಷನ್ ಶೂಟ್‌ಗಳ ಜೊತೆಗೆ ವಾಣಿಜ್ಯ ಮಾಡೆಲಿಂಗ್‌ಗಳಲ್ಲೂ ತೊಡಗಿಸಿಕೊಂಡಿದ್ದಳು ಎಂದಿದ್ದಾರೆ.
ಅಂಜಲಿಗೆ ಈ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಮದುವೆ ದಿನಾಂಕ ಕೂಡಾ ನಿಗದಿಯಾಗಿತ್ತು. ಆದರೆ ಆಕೆಯ ಭಾವಿ ಪತಿಯ ತಾಯಿ ನಿಧನರಾದ ಬಳಿಕ, ಈ ಮದವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಅಂಜಲಿ ಭಾವಿ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಆ ಸಮಯದಲ್ಲಿ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಅಂಜಲಿ ನೇಣು ಬಿಗಿದುಕೊಂಡಿದ್ದಾಳೆ. ಮನೆಯವರು ಹಿಂದಿರುಗಿದಾಗ, ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮೊದಲು, ಅಂಜಲಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಭಾವನಾತ್ಮಕ ಪೋಸ್ಟ್ ಹಾಕಿದ್ದಳು.