ಮೈಸೂರು: ನಾಳೆ ಮಾ.೮ರಂದು ಸಂಜೆ ೫ರಿಂದ ಮಾರನೇ ದಿನ ಬೆಳಗಿನ ಜಾವ ೪ರವರೆಗೆ ನಗರದ ಹಿನಕಲ್‌ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಆಧ್ಯಾತ್ಮಿಕ ಗುರು ಗುರುಮಾ ಆತ್ಮಾನಂದಮಯಿ ಅವರಿಂದ ಸುಷುಮ್ನ ಕ್ರಿಯಾ ಯೋಗ ಅಧಿವೇಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರ ಅನುಯಾಯಿ ದಿವ್ಯ ತಿಳಿಸಿದರು.
ದಿವ್ಯ ಬಾಬಾಜಿ ಸುಷುಮ್ನಾ ಕ್ರಿಯಾ ಯೋಗ ಫೌಂಡೇಷನ್‌ನಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗುರುಮಾ ಆತ್ಮಾನಂದಮಯಿ ಅವರು ಸುಷುಮ್ನಾ ಕ್ರಿಯಾ ಯೋಗದಲ್ಲಿ ಸಿದ್ಧಿ ಪಡೆದಿದ್ದು, ಆ ಬಗ್ಗೆ ಇತರರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದಾಗಿ ಉತ್ತಮ ಏಕಾಗ್ರತೆ, ಸ್ಮರಣ ಶಕ್ತಿ ವೃದ್ಧಿ, ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ ನಿರಂತರ ಜಾಗೃತಿ ಮೊದಲಾದ ಪ್ರಯೋಜನಗಳಿವೆ. ಇದು ಸಂಪೂರ್ಣ ಉಚಿತ ಪ್ರವೇಶದ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.