ಬೆಂಗಳೂರು : ಎಂ ಕೆ ದೊಡ್ಡಿ ಠಾಣೆ ಶೌಚಾಲಯದಲ್ಲಿ ಆರೋಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಂ ಕೆ ದೊಡ್ಡ ಠಾಣೆಯ ASI ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ASI ಪ್ರತಾಪ್, ಕಾನ್ಸ್ಟೇಬಲ್ ಗಳಾದ ಲಕ್ಷ್ಮೀನಾರಾಯಣ ಹಾಗೂ ಸೋಮನಾಥ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಂ.ಕೆ ದೊಡ್ಡಿ ಠಾಣೆಯಲ್ಲಿ ಆಗಸ್ಟ್ 20ರಂದು ಆರೋಪಿ ರಮೇಶ್ (59) ಆತ್ಮಹತ್ಯೆ ಮಾಡಿಕೊಂಡಿದ್ದ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡನಹಳ್ಳಿ ನಿವಾಸಿಯಾಗಿರುವ ರಮೇಶ್ ಆಗಸ್ಟ್ 20ರಂದು ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಳ್ಳತನ ಆರೋಪದ ಮೇಲೆ ಅರೆಸ್ಟ್ ಆಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದ.