Thursday, January 15, 2026
Google search engine

Homeರಾಜ್ಯಸುದ್ದಿಜಾಲಸುತ್ತೂರು ಜಾತ್ರಾ ಮಹೋತ್ಸವ ಕರ್ನಾಟಕಕ್ಕೆ ಕೀರ್ತಿ ತಂದಿದೆ: ಸುರೇಶ್ ಎನ್. ಋಗ್ವೇದಿ

ಸುತ್ತೂರು ಜಾತ್ರಾ ಮಹೋತ್ಸವ ಕರ್ನಾಟಕಕ್ಕೆ ಕೀರ್ತಿ ತಂದಿದೆ: ಸುರೇಶ್ ಎನ್. ಋಗ್ವೇದಿ

ಚಾಮರಾಜನಗರ: ಸುತ್ತೂರು ಜಾತ್ರಾ ಮಹೋತ್ಸವ ಇಡೀ ದೇಶದಲ್ಲಿ ತನ್ನದೇ ಆದ ವಿಶೇಷತೆಯ ಮೂಲಕ ಕರ್ನಾಟಕಕ್ಕೆ ಅಪಾರ ಕೀರ್ತಿ ಗೌರವವನ್ನು ತಂದಿದೆ. ಸುತ್ತೂರು ಮಠದ ನೇತೃತ್ವದ ಜಾತ್ರಾ ಮಹೋತ್ಸವ ಇತಿಹಾಸ, ಧರ್ಮ, ಸಂಸ್ಕೃತಿ ,ಪರಂಪರೆ ,ದೇಶಿಯ ಚಿಂತನೆಗಳ ಅಡಿಯಲ್ಲಿ ಮಾನವ ಕಲ್ಯಾಣದ ಪ್ರತಿಕವಾಗಿ ನಡೆಯುತ್ತಿರುವ ಜಾತ್ರೆಯಾಗಿದ್ದು, ಈ ಕಾರ್ಯವನ್ನು ಯಶಸ್ವಿಯಾಗಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸುತ್ತೂರು ಮಹಾಸ್ವಾಮೀಜಿಯವರಿಗೆ ಭಕ್ತಿ ಪೂರ್ವಕ ಧನ್ಯವಾದಗಳನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮುಖಂಡರಾದ ಸುರೇಶ್ ಎನ್ ಋಗ್ವೇದಿ ಅರ್ಪಿಸಿದ್ದಾರೆ.

ಸುತ್ತೂರು ಸಂಸ್ಥಾನವು ಶಿಕ್ಷಣ, ದಾಸೋಹ, ಧರ್ಮ, ಮಾನವ ಅಭಿವೃದ್ಧಿ ಹಾಗೂ ಸಮಗ್ರ ವಿಕಾಸದ ಮೂಲಕ ಮನೆ ಮಾತಾಗಿದೆ. ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಮೂಲಕ ಕೋಟ್ಯಾಂತರ ಜನರ ಬದುಕಿಗೆ ದಾರಿದೀಪವಾಗಿರುವ ಸುತ್ತೂರು ಮಠವು ಜಾತ್ರೆಯ ಮೂಲಕ ಪರಂಪರೆಯ ಪ್ರತೀಕವಾಗಿ ಜೀವಂತಿಕೆ ಸಲೆಯಾಗಿ ರೂಪಿಸಿ ಸಂಗೀತ ,ನೃತ್ಯ, ನಾಟಕ, ಕಲೆ, ಭಜನೆ, ಸಾಹಿತ್ಯ, ಧರ್ಮ ,ಇತಿಹಾಸ, ನೀರಾವರಿ, ಕೃಷಿ ,ಕೈಗಾರಿಕೆ, ವಿಜ್ಞಾನ, ಗುಡಿ ಕೈಗಾರಿಕೆ, ಸಮಗ್ರ ಕ್ಷೇತ್ರಗಳ ವಿಕಾಸದ ಜ್ಞಾನೋದಯದ ಜಾತ್ರೆಯಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಸಂತೋಷ ಹಾಗೂ ಆನಂದವನ್ನು ನೀಡುವ ಜಾತ್ರೆಯು ಧರ್ಮದ ಪ್ರತೀಕವಾಗಿದೆ. ಸುತ್ತೂರು ಮಠಕ್ಕೆ ಸರ್ವಜನರ ಕಲ್ಯಾಣದ ಗುರಿಯಿಂದ ಶಿಕ್ಷಣದ ಮೂಲಕ ಪ್ರತಿ ಮನೆಯ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಋಗ್ವೇದಿ ಧನ್ಯವಾದವನ್ನು ಅರ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular