ರಾಮನಗರ :ಜಿಲ್ಲೆಯಲ್ಲಿ ಜೀತಪದ್ದತಿಯನ್ನು ನಿರ್ಮೂಲನೆಗೊಳಿಸಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ತಿಳಿಸಿದರು.
ಅವರು ಇಂದು ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜೀತದಾಳು (ನಿರ್ಮೂಲನೆ)ಪದ್ದತಿ ಕಾಯ್ದೆ 1976 ರನ್ವಯ ಉಪವಿಭಾಗ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿಯಲ್ಲಿರುವ ಜೀತದಾಳು ಗುರುತಿಸಲು ಸಮೀಕ್ಷೆ ಮಾಡಿಸುವುದು, ವಸತಿ ರಹಿತರಿಗೆ ಪುನರ್ವಸತಿ ಕಲ್ಪಿಸುವುದು, ನಿವೇಶನ ರಹಿತರಿಗೆ ರಾಮನಗರ ಸುತ್ತಮುತ್ತಲು ಜಮೀನು ಗುರುತಿಸಿ ನಿವೇಶನ ಹಂಚಿಕೆ ಹಾಗೂ ಸಮೀಕ್ಷಾ ತಂಡದ ವರದಿ ಪಡೆದು ನಂತರ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲುಕು ಮಟ್ಟದ ಅಧಿಕಾರಿಗಳು ಹಾಗೂ ಉಪವಿಭಾಗ ಮಟ್ಟದ ಜೀತ ವಿಮುಕ್ತಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.