Tuesday, May 20, 2025
Google search engine

Homeರಾಜ್ಯಸುದ್ದಿಜಾಲಔಷಧಿ ಸಿಂಪಡಿಸಲು ಕ್ರಮ ಕೈಗೊಳ್ಳಿ : ಡಾ. ಅವಿನಾಶ್ ಮೆನನ್ ರಾಜೇಂದ್ರನ್

ಔಷಧಿ ಸಿಂಪಡಿಸಲು ಕ್ರಮ ಕೈಗೊಳ್ಳಿ : ಡಾ. ಅವಿನಾಶ್ ಮೆನನ್ ರಾಜೇಂದ್ರನ್

ರಾಮನಗರ: ರಾಮನಗರ ಜಿಲ್ಲಾ ವ್ಯಾಪ್ತಿಯ ರೇಷ್ಮೆ ಬೆಳೆಗಾರರ ಹಿಪ್ಪುನೇರಳೆ ತೋಟಗಳಿಗೆ ನುಸಿ/ ಥ್ರೀಪ್ಸ್ ಹಾವಳಿ ಕಂಡುಬAದಿದ್ದು, ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಕಡ್ಡಿ ಕಟಾವು ಮಾಡಿದ 20 ದಿನಗಳ ಒಳಗಾಗಿ ಒಂದು ನುಸಿ ನಾಶಕ ಔಷಧಿ ಸಿಂಪಡಿಸಲು ಕ್ರಮವಹಿಸುವುದು. ಈ ಬಗ್ಗೆ ಇಲಾಖೆಯ ಎಲ್ಲಾ ತಾಲ್ಲೂಕಿನ ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿಗಳು, ವಲಯಾಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಪ್ರತಿ ಹಳ್ಳಿಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಕೀಟ ನಿಯಂತ್ರಣದ ಬಗ್ಗೆ ತಾಂತ್ರಿಕ ಮಾಹಿತಿ ನೀಡಲು ಗುಂಪು ಚರ್ಚೆ ಏರ್ಪಡಿಸಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲು ತಿಳಿಸಿದ್ದಾರೆ.

ಅದರಂತೆ ಜಿಲ್ಲಾ ಮಟ್ಟದಲ್ಲಿ ಗುಂಪು ಚರ್ಚೆ ಪ್ರಾತÀ್ಯಕ್ಷತೆ ರೂಪದಲ್ಲಿ ನುಸಿ/ ಥ್ರೀಪ್ಸ್ ಹಾವಳಿ ನಿಯಂತ್ರಣಾ ಕ್ರಮಕೈಗೊಳ್ಳಲಾಗಿದ್ದು ರೇಷ್ಮೆ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಹಾವಳಿಯ ಲಕ್ಷಣಗಳು:  ಈ ಪೀಡೆಯು ತುತ್ತಾಗಿರುವ ತೋಟಗಳ ಎಲೆಗಳ ಮೇಲೆ ಮತ್ತು ಕೆಳ ಭಾಗಗಳಲ್ಲಿ ಅಧಿಕವಾಗಿ ನುಸಿ ಪೀಡೆಯ ಹಾವಳಿ ಹೆಚ್ಚಾಗಿದ್ದು ಸೊಪ್ಪಿನ ರಸ ಹೀರಿ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಎಲೆಗಳು ಚಿಕ್ಕದಾಗಿ ಮೇಲ್ಮುಖವಾಗಿ ಮುದುಡಿ ದೋಣಿಯ ಆಕಾರವಾಗಿ ಬೆಳವಣೆಗೆಯ ಕುಂಠಿತಗೊAಡು ಕ್ರಮೇಣ ಎಲೆ ಪೂರ್ತಿ ಕಂದು ಬಣ್ಣಕ್ಕೆ ತಿರುಗಿ ಎಲೆಯು ಒಣಗಿ ಉದುರಿ ಹೋಗುತ್ತದೆ.

ಹತೋಟಿ ಕ್ರಮಗಳು: ಕೀಟದ ಹಾವಳಿಯಿರುವ ಹಿಪ್ಪುನೇರಳೆ ತೋಟದಕುಡಿ ಚಿಗುರುಗಳನ್ನು ತೆಗೆದುಹಾಕಬೇಕು. ಗಿಡದ ತಳಬಾಗದಿಂದ ರಬಸವಾಗಿ ನೀರಿನ ಸಿಂಪಡಣೆ ಮಾಡಬೇಕು, ನುಸಿ ಪೀಡೆಗೆ ತುತ್ತಾಗುವುದನ್ನು ತಪ್ಪಿಸಲು ಒಂದು ಬಾರಿ ಶೇ.03 ಗಂಧಕ (ತಿeಣಣಚಿbಟesuಟಠಿhuಡಿ 80% – 3.0 ಗ್ರಾಂ ಪ್ರತಿ ಲೀಟರ್ ನೀರಿಗೆ) ದ್ರಾವಣವನ್ನು ಸಿದ್ದಪಡಿಸಿಕೊಂಡು ಎಲೆಗಳ ಕೆಳಭಾಗವು ಮತ್ತು ಮೇಲ್ಭಾಗ ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸುವುದು. ಇದರಿಂದ ನುಸಿ ಪೀಡೆಯ ಭಾದೆಗೆ ತುತ್ತಾಗುವುದು ತಪ್ಪಿಸಬಹುದು.

ಈ ರೋಗದ ಹೆಚ್ಚಿನ ಭಾದೆ ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕಿಗಳÀ ಹಿಪ್ಪುನೇರಳೆ ತೋಟದಲ್ಲಿ ಕಂಡು ಬಂದಿದ್ದು, ರೈತ ಬಾಂದವರು ಈ ಕ್ರಮವನ್ನು ಅನುಸರಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular