Tuesday, February 10, 2026
Google search engine

Homeಸ್ಥಳೀಯಮೈಸೂರು ಸ್ಯಾಂಡಲ್ ಜೊತೆ ಹೊಸ ಅಧ್ಯಾಯ ಆರಂಭಿಸಿದ ತಮನ್ನಾ

ಮೈಸೂರು ಸ್ಯಾಂಡಲ್ ಜೊತೆ ಹೊಸ ಅಧ್ಯಾಯ ಆರಂಭಿಸಿದ ತಮನ್ನಾ

ಬೆಂಗಳೂರು : ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ‘ಮೈಸೂರು ಸ್ಯಾಂಡಲ್ ಸೋಪ್’ನ ರಾಯಭಾರಿಯಾಗಿದ್ದಾರೆ. ಇಂದಿನಿಂದ ಎರಡು ವರ್ಷಗಳವರೆಗೆ ಅವರು ಈ ಬ್ರ್ಯಾಂಡ್​ನ ರಾಯಭಾರಿ ಆಗಲಿದ್ದಾರೆ. ಇಂದು (ಫೆಬ್ರವರಿ 10) ಬೆಂಗಳೂರಿಗೆ ಆಗಮಿಸಿದ ಅವರು, ಅದ್ದೂರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಮನ್ನಾ ಭಾಟಿಯಾ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು ಅನ್ನೋದು ವಿಶೇಷ. ‘ಎಲ್ಲರಿಗೂ ನಮಸ್ಕಾರ’ ಎಂದು ಹೇಳಿದ ತಮನ್ನಾ ನಂತರ ಆಂಗ್ಲ ಭಾಷೆಯಲ್ಲಿ ಮಾತು ಮುಂದುವರಿಸಿದರು. ತಮನ್ನಾ ಭಾಟಿಯಾ ಅವರಿಗೆ ಈ ದಿನ ತುಂಬಾನೇ ವಿಶೇಷವಂತೆ. ವೃತ್ತಿ ಜೀವನದಲ್ಲಿ ಇಷ್ಟು ವರ್ಷ ಒಂದು ಲೆಕ್ಕ ಆದರೆ, ಇನ್ನುಮುಂದೆ ಮತ್ತೊಂದು ರೀತಿಯ ಲೆಕ್ಕ’ ಎಂದು ತಮನ್ನಾ ಹೇಳಿದರು.

RELATED ARTICLES
- Advertisment -
Google search engine

Most Popular