Sunday, June 8, 2025
Google search engine

HomeUncategorizedರಾಷ್ಟ್ರೀಯತಮಿಳುನಾಡು: ಕಲ್ಲು ಕ್ವಾರಿಯಲ್ಲಿ ಸ್ಫೋಟ- ಮೂವರ ಶವ ಪತ್ತೆ

ತಮಿಳುನಾಡು: ಕಲ್ಲು ಕ್ವಾರಿಯಲ್ಲಿ ಸ್ಫೋಟ- ಮೂವರ ಶವ ಪತ್ತೆ

ತಮಿಳುನಾಡು: ವಿರುದುನಗರ ಜಿಲ್ಲೆಯ ಕರಿಯಾಪಟ್ಟಿ ಪ್ರದೇಶದಲ್ಲಿ ಬುಧವಾರ ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿ ಮೂವರ ಶವ ಪತ್ತೆಯಾಗಿದ್ದು, ಹಲವು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.  

ಭಾರೀ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಶೇಖರಣಾ ಕೊಠಡಿಯಲ್ಲಿ ಸ್ಫೋಟಕಗಳಿದ್ದು ಅಲ್ಲೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳನ್ನು ಎಚ್ಚರಿಕೆಯಿಂದ ತೆರವುಗೊಳಿಸುತ್ತಿವೆ ಮತ್ತು ಸ್ಫೋಟಗೊಳ್ಳದ ವಸ್ತುಗಳನ್ನು ಹುಡುಕುತ್ತಿವೆ.

ಸುರಕ್ಷತಾ ಅಪಾಯಗಳು ಮತ್ತು ಓವರ್‌ಲೋಡ್ ಟ್ರಕ್‌ ಗಳನ್ನು ಒಳಗೊಂಡ ಅನೇಕ ವಿಚಾರಗಳ ಬಗ್ಗೆ ಹಲವು ದಿನಗಳಿಂದ ದೂರು ಬರುತ್ತಿತ್ತು. ಸ್ಫೋಟದ ಮೊದಲು ಕ್ವಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಕಲ್ಲು ಕ್ವಾರಿ ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular