ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ತಮ್ಮಣ್ಣೇಗೌಡ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ಗ್ರಾ.ಪಂ ಕಚೇರಿಯಲ್ಲಿ ನಡೆದ ದ ಅಧ್ಯಕ್ಷ ಸ್ಥಾನಕ್ಕೆ ತಮ್ಮಣ್ಣೇಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೃಷಿ ಇಲಾಖೆಯ ಎ.ಡಿ.ಮಲ್ಲಿಕಾರ್ಜುನ್ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಹಾಲಿ ಅಧ್ಯಕ್ಷರಾಗಿದ್ದ ಬಾಬು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.ಚುನಾವಣೆ ಗ್ರಾ.ಪಂ.ಪಿಡಿಓ ಕೆ.ನವೀನ್, ಕಾರ್ಯದರ್ಶಿ ಕೆ.ಎನ್.ರಾಮೇಗೌಡ ಸಹಕಾರ ನೀಡಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಿ, ಸದ್ಯಸರಾದ ಎ.ವಿ.ಧನಂಜಯ,ಮಂಜುಳಾ, ಬಾಬು,ಲಕ್ಷ್ಮಮ್ಮ,ತುಳಸಮ್ಮ ಇದ್ದರು ಸದಸ್ಯರಾದ ಮಹದೇವು, ದಿನೇಶ್, ಅಮ್ರಿನ್ ತಾಜ್ ಗೈರು ಹಾಜರಾಗಿದ್ದರು.
ಅಧ್ಯಕ್ಷರಾಗಿ ಮಾತಾನಾಡಿದ ತಮ್ಮಣ್ಣೇಗೌಡ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನ ಒದಗಿಸುವುದರ ಜತಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಕ್ಕೆ ಮುಂದಾಗುವುದಾಗಿ ತಿಳಿಸಿದರು.
ನಂತರ ನೂತನ ಅಧ್ಯಕ್ಷರನ್ನು ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಮಾಜಿ ನಿರ್ದೇಶಕಿ ವಿಜಿಯಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ಉಪಾಧ್ಯಕ್ಷ ಹೊಸೂರು ಕುಚೇಲ್, ನಿರ್ದೇಶಕ ಎಸ್.ಆರ್.ಪ್ರಕಾಶ್, ಹರದನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವ್ಯಬಲರಾಮೇಗೌಡ, ಕರ್ಪೂರವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶನ್ನಾಚಾರ್, ಮುಖಂಡರಾದ ವಕೀಲ ತಿಮ್ಮಪ್ಪ, ಎ.ಜಿ.ಮನು, ಸಚಿನ್ ಕಾಯಿಮಧು, ರಂಗಪ್ಪ ಸೇರಿದಂತೆ ಮತ್ತಿತರರು ಅಭಿನಂಧಿಸಿ ಗ್ರಾಮದಲ್ಲಿ ಪಟಾಕಿಸಿ ಸಿಡಿಸಿ ಮೆರವಣಿಗೆ ನಡೆಸಿ ವಿಜಿಯೋತ್ಸವ ಆಚರಿಸಲಾಯಿತು.