Tuesday, September 16, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರದಲ್ಲಿ ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳಿಂದ ಗುರುಗಳಿಗೆ ಪ್ರೀತಿಯ ಗೌರವ

ಚಾಮರಾಜನಗರದಲ್ಲಿ ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳಿಂದ ಗುರುಗಳಿಗೆ ಪ್ರೀತಿಯ ಗೌರವ

ಚಾಮರಾಜನಗರ: ತಾಲೂಕು ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇಂದು ಎಲ್ಲೆಲ್ಲೂ ವಿದ್ಯಾರ್ಥಿಗಳ ಸಂಭ್ರಮವೋ ಸಂಭ್ರಮ. ಪ್ರತಿ ಹೆಜ್ಜೆಯಲ್ಲಿಯು ಮಾರ್ಗದರ್ಶನ ,ಶಿಕ್ಷಣ ,ಮೌಲ್ಯಗಳು ,ಪ್ರೀತಿ-ವಿಶ್ವಾಸ, ನಂಬಿಕೆ ,ಗೌರವ ಪ್ರೋತ್ಸಾಹ, ಸ್ಪೂರ್ತಿ ತುಂಬುವ ಜೀವನದ ಅತಿ ಮುಖ್ಯ ವ್ಯಕ್ತಿಯಾದ ಶಿಕ್ಷಕರಿಗೆ ಗೌರವ ಸಲ್ಲಿಸುವ ಪ್ರೀತಿಯ, ಆನಂದದ ಸರಳ ಕಾರ್ಯಕ್ರಮ ಜರುಗಿತು.

ಪಿಯುಸಿ ವಿದ್ಯಾರ್ಥಿಗಳ ಬೋಧನೆ ಮಾಡುವ ಎಲ್ಲಾ ಉಪನ್ಯಾಸಕರಿಗೆ ವಿದ್ಯಾರ್ಥಿಗಳೇ ತಯಾರು ಮಾಡಿದ ನೆನಪಿನ ಕಾಣಿಕೆ, ಗುಲಾಬಿತನ್ಮೂಲಕ ಪ್ರೀತಿಯ ಕಾಣಿಕೆ ನೀಡಿ ಸಂಭ್ರಮಿಸಿದ್ದು ಕಂಡ ಬಂದಿತು. ಉದ್ಘಾಟನೆಯನ್ನು ಹಿರಿಯ ಉಪನ್ಯಾಸಕ ಆರ್ ಮೂರ್ತಿ ನೆರವೇರಿಸಿ ಶಿಕ್ಷಕ ವೃತ್ತಿ ಬಹಳ ಗೌರವವಾದ ವೃತ್ತಿ. ಕಳೆದ ಮೂರು ದಶಕಗಳಿಂದ ವಿದ್ಯಾರ್ಥಿಗಳ ಜೊತೆ ಶಿಕ್ಷಣ ನೀಡುವ ವೃತ್ತಿ ಮಾಡುತ್ತಿರುವುದು ಬಹಳ ಸಂತೋಷವನ್ನು ತಂದಿದೆ ಎಂದರು.

ಮುಖ್ಯ ಭಾಷಣ ನೆರವೇರಿಸಿದ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಇಡೀ ಭಾರತದ ಶಿಕ್ಷಕರಿಗೆ ಡಾ. ಎಸ್ ರಾಧಾಕೃಷ್ಣನ್ ರವರು ನೀಡಿದ ಮಹಾನ್ ಗೌರವ. ಶಿಕ್ಷಕರಾಗಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ರಾಧಾಕೃಷ್ಣನ್ ರವರ ಜ್ಞಾನ ಜಗತ್ತಿಗೆ ನೀಡಲ್ಪಟ್ಟಿತ್ತು .ಭಾರತೀಯ ತತ್ವ ಜ್ಞಾನವನ್ನು, ಉಪನಿಷತ್ತಿನ ದಿವ್ಯ ಅರ್ಥವನ್ನು ಅತ್ಯಂತ ಸರಳವಾಗಿ ವಿಶ್ವಕ್ಕೆ ನೀಡಿದ ಕೀರ್ತಿ ರಾಧಾಕೃಷ್ಣನ್ ರವರಿಗೆ ಸಲ್ಲುತ್ತದೆ. ಮಾನವನ ಪ್ರತಿ ಕ್ಷಣದಲ್ಲೂ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿ ಶಿಕ್ಷಕ. ತಂದೆ ತಾಯಿಯ ನಂತರ ಎಲ್ಲ ಜನರ ಬದುಕಿನಲ್ಲಿ ಶಿಕ್ಷಕರಿಗೆ ವಿಶೇಷವಾದ ಸ್ಥಾನವನ್ನು ನೀಡಿ ಗೌರವಿಸುವ ಪರಂಪರೆ ಇದೆ. ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಗುರುವಿನ ಹಾದಿಯಲ್ಲಿ ನಡೆಯಿರಿ ಎಂದರು.

ಉಪನ್ಯಾಸಕರಾದ ಶಿವರಾಂ, ಬಸವಣ್ಣ, ರಮೇಶ್, ಸುರೇಶ್ ದೊಡ್ಡಮ್ಮ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧದ ಕುರಿತು ತಮ್ಮ ಅನುಭವಗಳ ಸಮಗ್ರ ಮಾಹಿತಿಯನ್ನು ನೀಡಿ ಉತ್ತಮ ಹಾಡುಗಳನ್ನು ಹೇಳಿ ಸಂತೋಷ ಪಡಿಸಿದರು.

ಶಿಕ್ಷಕರಿಗೆ ಸರಳವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಗೌರವ ನಮನ ಸಲ್ಲಿಸಿದ್ದು ವಿಶೇಷ. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವರಾಜಪ್ಪನವರು ಉಳಿಸಿ ಮಾತನಾಡಿ ಎಸ್ ರಾಧಾಕೃಷ್ಣನ್ ರವರು ತಮ್ಮ ಜನ್ಮದಿನವನ್ನು ಶಿಕ್ಷಕರಿಗೆ ಅರ್ಪಿಸಿ ಸೆಪ್ಟೆಂಬರ್ ಐದರಂದು ಇಡೀ ದೇಶದಲ್ಲಿ ಶಿಕ್ಷಕರನ್ನು ಸ್ಮರಿಸಿಕೊಳ್ಳಲು ಅವಕಾಶವಾಯಿತು ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ಶೀಲಾ, ಆದಿತ್ಯ, ತೇಜಶ್ರೀ ,ಕವನ ಪ್ರಿಯ, ಭವಾನಿ ಪೂಜಾ, ಕವನ,ಶಶಿಕಲಾ, ಕಾರ್ಯಕ್ರಮ ನಡೆಸಿಕೊಟ್ಟರು.

RELATED ARTICLES
- Advertisment -
Google search engine

Most Popular