ಹುಣಸೂರು,ಡಿ.20 : ನಗರದ ಸಂವಿಧಾನ ವೃತ್ತದಲ್ಲಿ. ರೋಟರಿ ಕ್ಲಬ್ , ಹುಣಸೂರು ಆರೋಗ್ಯ ಇಲಾಖೆವತಿಯಿಂದ ಹಮ್ಮಿ ಕೊಂಡಿದ್ದ ಪೋಲಿಯೋ ಲಸಿಕೆ ಹಾಕಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದ ಆದೇಶದಂತೆ ಪ್ರತಿವರ್ಷ ಡಿಸೆಂಬರ್ 21. ರಂದು ತಪ್ಪದೇ ಲಸಿಕೆ ಹಾಕಿಸಿ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಪ್ರತಿ ಪೋಷಕರು ಐದು ವರ್ಷ ಒಳ ಪಟ್ಟಮಕ್ಕಳಿಗೆ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜಕ್ಕೆ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ. ನಮ್ಮ ದೇಶವು ಸೇರಿದಂತೆ. ವಿಶ್ವದೆಲ್ಲೆಡೆ ಮಾರಕ ರೋಗವಾಗಿ ಬೇರು ಬಿಟ್ಟಿದ್ದ, ಪೋಲಿಯೋ ಮುಕ್ತ ಮಾಡಲು. ಹಲವಾರು ವರ್ಷಗಳಿಂದ ಆರೋಗ್ಯ ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಿ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಪ್ರಮುಖ ಪಾತ್ರವಹಿಸಿದೆ ಎಂದರು.
ಪ್ರಬಾರ ತಾಲೂಕು ಆರೋಗ್ಯಾಧಿಕಾರಿ ದರ್ಶನ್ ಮಾತನಾಡಿ, ಮಕ್ಕಳ ಆರೋಗ್ಯಕ್ಕಾಗಿ ಸರಕಾರ ಸಾವಿರಾರು ಕೋಟಿ ರೂ,ಗಳನ್ನು ಸಾರ್ವಜನಿಕ ಆಸ್ಪತ್ರೆಗಳಿಗೆ ವ್ಯಯ ಮಾಡುತ್ತಿದ್ದು, ಸರಿಯಾದ ಸಮಯಕ್ಕೆ ಉಚಿತವಾಗಿ ಸಿಗುವ ಚಿಕಿತ್ಸೆಯನ್ನು ಪಡೆದು ಪರಿಪೂರ್ಣ ಆರೋಗ್ಯವಂತರಾಗಲಿ ಎಂದರು.
ಪೋಲಿಯೋ ಜಾಥದಲ್ಲಿ, ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಸಿಡಿಪಿಓ ಎಸ್.ಜಿ.ಹರೀಶ್, ರೋಟರಿ ಕಾರ್ಯದರ್ಶಿ ಶ್ಯಾಮಣ್ಣ, ಸದಸ್ಯರಾದ ಆನಂದ್ ಆರ್.ಚಿಲ್ಕುಂದ ಮಹೇಶ್, ಸಿಡಿಪಿಒ ಮೇಲ್ವಿಚಾರಕಿ ಜಯಶ್ರೀ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಆರೋಗ್ಯ ಇಲಾಖೆಯ ಅನಂತಿ, ಚಂದ್ರೇಗೌಡ, ರವಿ, ಅರುಣ್, ಶ್ರೀ ನಿವಾಸ್, ಆರೋಗ್ಯ ಇಲಾಖೆ ಸಿಬಂದಿ, ಆಶಾ ಕಾರ್ಯಕರ್ತೆಯರು, ಹಾಗೂ ಶಾಲಾ ಮಕ್ಕಳುಗಳು ಇದ್ದರೂ.



