ಧಾರವಾಡ: ಕೇಂದ್ರ ಸಚಿವ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಮತ್ತು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಡುವೆ ವಾಕ್ ಸಮರ ಮುಂದುವರೆದಿದೆ
ನಿನ್ನೆ ಧಾರವಾಡದಲ್ಲಿ ಚುನಾವಣಾ ಪ್ರಚಾರ ಸಭೆಯೊಂದಲ್ಲಿ ಮಾತಾಡಿದ ಜೋಶಿ ಅವರು ಲಾಡ್ ಮೇಲೆ ಮಾತಿನ ಪ್ರಹಾರ ನಡೆಸಿದರು.
ಲಾಡ್ ಅವರನ್ನು ತಾನ್ಯಾವತ್ತೂ ಸಾರ್ವಜನಿಕ ಸಭೆಗಳಲ್ಲಿ ಬೈದಿಲ್ಲ ಎಂದು ಹೇಳಿದ ಜೋಶಿ, ಆದರೆ ನಿನ್ನೆ ಅವರು ತನ್ನ ವಿರುದ್ಧ ಬಹಳ ಮಾತಾಡಿರುವುದರಿಂದ ಕೆಲ ವಿಷಯಗಳನ್ನು ಹೇಳಬೇಕಿದೆ ಎಂದರು.
ಪ್ರತಿ ಸಭೆಯಲ್ಲಿ ಮತ್ತು ಮಾಧ್ಯಮಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ತನ್ನನ್ನು ಟೀಕಿಸುವ ಲಾಡ್ ಇಂಡಿಯ ಒಕ್ಕೂಟಕ್ಕೆ ಬಹಮತ ಸಿಕ್ಕರೆ ತಮ್ಮ ನಾಯಕ ಯಾರಾಗಲಿದ್ದಾರೆ ಅಂತ ಹೇಳಲಿ ಅಂತ ಜೋಶಿ ಸವಾಲೆಸದರು.
ನಮ್ಮ ನಾಯಕ ಮೋದಿ ಎಂದು ನಾವು ಎದೆತಟ್ಟಿಕೊಂಡು ಹೇಳುತ್ತೇವೆ ಮತ್ತು ಅವರೇ ಮೂರನೇ ಬಾರಿಗೆ ಪ್ರಧಾನಿ ಅಗಲಿದ್ದಾರೆ ಅಂತ ಇಡೀ ದೇಶಕ್ಕೆ ಗೊತ್ತಿದೆ ಎಂದು ಜೋಶಿ ಹೇಳಿದರು.
ಎಲ್ಲಿಯ ಮೋದಿ ಎಲ್ಲಿಯ ಲಾಡ್ ಎಂದು ಹೇಳಿದ ಅವರು ಕಾರ್ಮಿಕ ಸಚಿವನಿಗೆ ಮತ್ತೊಂದು ಪ್ರಶ್ನೆ ಹಾಕಿ; ಅವರ ಮಕ್ಕಳು ಪ್ರಧಾನಿ ಮೋದಿ ಅವರಂತೆ ಆಗುವುದನ್ನು ಬಯಸುತ್ತಾರೋ ಅಥವಾ ರಾಹುಲ್ ಗಾಂಧಿ ಥರ ಅಗುವುದು ಬಯಸುತ್ತಾರೋ ಅನ್ನೋದನ್ನು ಎದೆಮುಟ್ಟಿಕೊಂಡ ಹೇಳಲಿ ಅಂತ ಹೇಳಿದರು.



