ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಹಲವು ದೇವಾಲಯಗಳಲ್ಲಿ ಕಳವು ನಡೆದ ಪ್ರಕರಣ ಮಾಸುವ ಮುನ್ನವೇ ಹೋಬಳಿಯ ದಿಡಹಳ್ಳಿ ಗ್ರಾಮ ಗ್ರಾಮ ದೇವತೆ ದೊಡ್ಡಮ್ಮತಾಯಿ ದೇವಾಲಯದಲ್ಲಿ ಕಳ್ಳತನ ನಡೆದಿದೆ.

ಮಂಗಳವಾರ ರಾತ್ರಿ ದೇವಾಲಯದ ಬೀಗ ಒಡೆದು ದೇವರ ಮೂರ್ತಿಯ ಮೇಲಿದ್ದ 4 ಮಾಂಗಲ್ಯ,ಕಿವಿ ಓಲೆ ಸೇರಿದಂತೆ ಸುಮಾರು ಒಂದು ಲಕ್ಷ ಬೆಲೆಬಾಳುವ ಆಭರಣ ಮತ್ತು ಹಣವನ್ನು ದೋಚಿದ್ದು ಸ್ಥಳಕ್ಕೆ ಚುಂಚನಕಟ್ಟೆ ಉಪಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಗಾರೆ ಕೃಷ್ಣ ಮಾತನಾಡಿ ಕಳ್ಳರು ದೇವಾಲಯಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದು ಪೋಲಿಸ್ ಇಲಾಖೆ ರಾತ್ರಿ ಗಸ್ತನ್ನು ಹೆಚ್ಚಿಸಿ ಶೀಘ್ರವೇ ಕಳ್ಳರನ್ನು ಪತ್ತೆ ಹಚ್ಚಬೇಕಾಗಿ ಆಗ್ರಹಿಸಿದ್ದಾರೆ.