ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡುವ ಮೂಲಕ ಟೆಹ್ರಾನ್ ಕದನ ವಿರಾಮ ಒಪ್ಪಂದವನ್ನು ಮತ್ತೆ ಮುರಿದಿದೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಇಂತಹ ದಾಳಿಗಳು ಮುಂದುವರಿದರೆ, ಇಸ್ಲಾಮಿಕ್ ಗಣರಾಜ್ಯವು (ಇರಾನ್) ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್ನಲ್ಲಿ ಟ್ರಂಪ್, “ಅಮೆರಿಕದ ಯುದ್ಧವಿಮಾನಗಳು ಇರಾನ್ನ ಮಿಸೈಲ್ ಮತ್ತು ಡ್ರೋನ್ ಸಂಗ್ರಹಣಾ ಸ್ಥಳಗಳ ಜೊತೆಗೆ ಕರಾವಳಿ ರಾಡಾರ್ ಕೇಂದ್ರಗಳ ಮೇಲೆಯೂ ದಾಳಿ ನಡೆಸಿವೆ. ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕದ ವಿಮಾನಗಳು ಇರಾನ್ನ ಕ್ಷಿಪಣಿ ಮತ್ತು ಡ್ರೋನ್ ಶೇಖರಣಾ ತಾಣಗಳು ಹಾಗೂ ಕರಾವಳಿ ರಾಡಾರ್ ಕೇಂದ್ರಗಳ ಮೇಲೆ ಮತ್ತೊಮ್ಮೆ ದಾಳಿ ಮಾಡಿವೆ! ಅವರು ಎಂದಿಗೂ ಕಲಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ!” ಎಂದು ಬರೆದುಕೊಂಡಿದ್ದಾರೆ.
“ನಾವು ಇನ್ನು ಮುಂದೆ ಸಂಯಮದಿಂದ ವರ್ತಿಸಲು ಸಾಧ್ಯವಾಗದ ಮತ್ತು ನಾವು ಅತ್ಯಂತ ಯಶಸ್ವಿಯಾಗಿ ಪ್ರಾರಂಭಿಸಿದ ಕೆಲಸವನ್ನು ಮಿಲಿಟರಿ ಮೂಲಕ ಪೂರ್ಣಗೊಳಿಸಲು ಒತ್ತಾಯಿಸಲ್ಪಡುವ ಪರಿಸ್ಥಿತಿ ಬರಬಹುದು. ಒಂದು ವೇಳೆ ಹಾಗೇನಾದರೂ ಸಂಭವಿಸಿದರೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಸ್ತಿತ್ವದಲ್ಲಿ ಉಳಿಯುವುದಿಲ್ಲ!” ಎಂದು ಹೇಳಿದ್ದಾರೆ.
ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿಕೆ
ಮತ್ತೊಂದೆಡೆ, ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ಏಕಪಕ್ಷೀಯವಾಗಿ ಅಟ್ಯಾಕ್ ಡ್ರೋನ್ ಅನ್ನು ಉಡಾವಣೆ ಮಾಡಿದ ನಂತರ, ಅಧ್ಯಕ್ಷರ ಆದೇಶದ ಮೇರೆಗೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ. ಈ ಡ್ರೋನ್ ಬೆಳಗಿನ ಜಾವ ಇಟಿ (ET) ಸಮಯ 4.30 ಕ್ಕೆ ಪನಾಮ ಧ್ವಜದ ‘ಎಂ/ಟಿ ಕಿಕು’ (M/T Kiku) ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಈ ಟ್ಯಾಂಕರ್ ಎರಡು ಮಿಲಿಯನ್ಗಿಂತಲೂ ಹೆಚ್ಚು ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತು ಹಾರ್ಮುಜ್ ಜಲಸಂಧಿಯ ಬಳಿ ಸಾಗುತ್ತಿತ್ತು.
‘ಎಂ/ವಿ ಎವರ್ ಲವ್ಲಿ’ (M/V Ever Lovely) ಮೇಲಿನ ದಾಳಿಗೆ ಪ್ರತಿಯಾಗಿ ಶುಕ್ರವಾರ ಅಮೆರಿಕ ನಡೆಸಿದ ದಾಳಿಯ ನಂತರ, ಇರಾನ್ಗೆ ಕದನ ವಿರಾಮ ಪಾಲಿಸಲು ಅವಕಾಶ ನೀಡಲಾಗಿತ್ತು ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.
ಶುಕ್ರವಾರದ ಅಮೆರಿಕದ ಪ್ರತಿದಾಳಿಯ ನಂತರ ಇರಾನ್ಗೆ ಕದನ ವಿರಾಮ ಒಪ್ಪಂದವನ್ನು ಗೌರವಿಸಲು ಅವಕಾಶ ನೀಡಲಾಗಿತ್ತು ಎಂದು ಕಮಾಂಡ್ ತಿಳಿಸಿದೆ. ಆದರೆ, ಇರಾನ್ ಈ ಒಪ್ಪಂದವನ್ನು ಗೌರವಿಸಲಿಲ್ಲ ಮತ್ತು ಇಂದು ಬೆಳಗ್ಗೆ ಭಾರತೀಯ ಕಾಲಮಾನದ ಪ್ರಕಾರ 4.30 ಕ್ಕೆ (ET) ‘ಎಂ/ಟಿ ಕಿಕು’ ಅನ್ನು ಗುರಿಯಾಗಿಸಿಕೊಂಡು ಏಕಪಕ್ಷೀಯವಾಗಿ ದಾಳಿ ಮಾಡುವ ಡ್ರೋನ್ ಅನ್ನು ಉಡಾವಣೆ ಮಾಡಿದೆ ಎಂದು ಅದು ಪ್ರತಿಪಾದಿಸಿದೆ.
ಮತ್ತೊಂದು ಪ್ರತ್ಯೇಕ ಪೋಸ್ಟ್ನಲ್ಲಿ ಕಮಾಂಡ್, “ಇರಾನ್ ‘ಎಂ/ಟಿ ಕಿಕು’ ಮೇಲೆ ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ, ಅಮೆರಿಕ ನೌಕಾಪಡೆ ಮತ್ತು ವಾಯುಪಡೆಯ ಯುದ್ಧವಿಮಾನಗಳು ಇಂದು ರಾತ್ರಿ ಹಾರ್ಮುಜ್ ಜಲಸಂಧಿಯಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ಇರಾನ್ನ 10 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ” ಎಂದು ಮಾಹಿತಿ ನೀಡಿದೆ. (ಏಜೆನ್ಸಿಸ್)



