ಹೊಸದಿಲ್ಲಿ: ಭಯಾನಕ ಸರಣಿ ಪ್ರಾಕೃತಿಕ ವಿಕೋಪಗಳಿಗೆ ಸಾಕ್ಷಿಯಾಗಿರುವ ಜಪಾನ್ ಹಾಗೂ ತೈವಾನ್ ಇದೀಗ ಪ್ರಬಲ ಭೂಕಂಪಕ್ಕೆ ಸಾಕ್ಷಿಯಾಗಿದೆ. ಇದು ವ್ಯಾಪಕ ಕಳವಳಕ್ಕೆ ಕಾರಣವಾಗಿದ್ದು, ಪರಿಹಾರ ಮತ್ತು ರಕ್ಷಣಾ ತಂಡಗಳ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಶಕ್ತಿಶಾಲಿ ಭೂಕಂಪದ ಬಳಿಕ ಒಕಿನವ ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಪಾನ್ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ತೈವಾನ್ ಮೇಲೂ ಇದರ ಪ್ರಭಾವ ಸಾಧ್ಯತೆ ಇದ್ದು, ಸುಮಾರು ಮೂರು ಮೀಟರ್ ಎತ್ತರದ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಪಾನ್ ಹವಾಮಾನ ಏಜೆನ್ಸಿಯ ಮಾಹಿತಿಯಂತೆ ತೈವಾನ್ ಸಮೀಪ ೭.೫ ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಸಾಗರದ ಮೇಲ್ಮೈ ಮೇಲೆ ಗಂಭೀರ ಪರಿಣಾಮ ಬೀರಿ, ವಿನಾಶಕಾರಿ ಸುನಾಮಿ ಅಲೆಗಳನ್ನು ಸೃಷ್ಟಿಸುವ ಸಾಮಥ್ರ್ಯ ಹೊಂದಿವೆ ಸ್ಪಷ್ಟಪಡಿಸಿದೆ.
ತೈವಾನ್‌ನಲ್ಲಿ ಕೂಡಾ ೭.೨ ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಕುಸಿದು ಬೀಳುತ್ತಿರುವ ದೃಶ್ಯಗಳು ವರದಿಯಾಗಿವೆ.