Friday, January 16, 2026
Google search engine

Homeಅಪರಾಧಮಂಡ್ಯದಲ್ಲಿ ಅಣ್ಣ–ಮಕ್ಕಳಿಂದ ತಮ್ಮನ ಭೀಕರ ಹತ್ಯೆ

ಮಂಡ್ಯದಲ್ಲಿ ಅಣ್ಣ–ಮಕ್ಕಳಿಂದ ತಮ್ಮನ ಭೀಕರ ಹತ್ಯೆ

ಮಂಡ್ಯ : ಅಣ್ಣನೇ ತನ್ನ ಮಕ್ಕೊಳೊಂದಿಗೆ ಸೇರಿ ತಮ್ಮನನ್ನು 28 ಬಾರಿ ಇರಿದು ಕೊಂದ ಘಟನೆ ಮಂಡ್ಯದ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಕೊಲೆಯಾದ ನತದೃಷ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಕೊಲೆಯಾದವನ ಅಣ್ಣ ಲಿಂಗರಾಜು, ಮಕ್ಕಳಾದ ಭರತ್, ದರ್ಶನ್‍ರಿಂದ ಈ ಕೃತ್ಯ ನಡೆದಿದೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಲಿಂಗರಾಜು ಹಾಗೂ ಕೊಲೆಯಾದ‌ ಯೋಗೇಶ್ ನಡುವೆ ಆಸ್ತಿ ಕಲಹವಿತ್ತು. ಆಸ್ತಿ ವಿಷಯಕ್ಕೆ ಆಗಾಗ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಯೋಗೇಶ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದೇ ತಿಂಗಳು 21 ರಂದು ಯೋಗೇಶ್ ಮದುವೆ ನಿಗದಿಯಾಗಿತ್ತು. ಮದುವೆ ಆಹ್ವಾನ ಪತ್ರದಲ್ಲಿ ಅಣ್ಣನ ಹೆಸರನ್ನೂ ಹಾಕಿ ಊರಿಗೆಲ್ಲ ಹಂಚಿದ್ದ. ದುರಾದೃಷ್ಟವಶಾತ್‌ ಅದೇ ಅಣ್ಣನಿಂದ ಯೋಗೇಶ್ ಹತ್ಯೆಯಾಗಿದ್ದಾನೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES
- Advertisment -
Google search engine

Most Popular