Thursday, August 14, 2025
Google search engine

Homeರಾಜ್ಯಸುದ್ದಿಜಾಲಅಬ್ಬೂರು ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ 12ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು

ಅಬ್ಬೂರು ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ 12ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು

ಪಿರಿಯಾಪಟ್ಟಣ : ಪಟ್ಟಣದ ಅಬ್ಬೂರು ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ 12ನೇ ವರ್ಷದ ವಾರ್ಷಿಕೋತ್ಸವವೂ ವಿಜೃಂಭಣೆಯಿಂದ ಜರುಗಿತು.

ಕಳೆದ ಎರಡು ದಿನಗಳಿಂದ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಸ್ವಾಮಿ, ಲಕ್ಷ್ಮಿ ವೆಂಕಟೇಶ್ವರ, ಆಂಜನೇಯ ಹಾಗೂ ಸುಗ್ರೀವ ಬಸಪ್ಪ ಮಹಾರಾಜ್ ರವರುಗಳಿಗೆ ವಿಶೇಷ ಪೂಜಾ ಕಂಕರ್ಯ ಹಮ್ಮಿಕೊಳ್ಳಲಾಗಿತ್ತು.
ವಾರ್ಷಿಕೋತ್ಸವದ ಅಂಗವಾಗಿ ಮುಂಜಾನೆ ಇಂದಲೇ ದೇವರಿಗೆ ಮಹಾರುದ್ರ ಅಭಿಷೇಕ ನೆರವೇರಿಸಿ ಹೋಮಹವನ ಮಾಡಲಾಯಿತು ಹಾಗೂ ವಿವಿಧ ಬಗೆಯ ವಿಶೇಷ ಪುಷ್ಪಗಳಿಂದ ದೇವರನ್ನು ಶೃಂಗರಿಸಿ ಮಹಾ ಮಂಗಳಾರತಿ ಮಾಡಲಾಯಿತು.

ದೇವಸ್ಥಾನದ ವ್ಯವಸ್ತಾಪಕರು ಹಾಗೂ ಪ್ರಧಾನ ಅರ್ಚಕರಾದ ಶ್ರೀ ರಾಜು ಸ್ವಾಮಿ ಮಾತನಾಡಿ ಪ್ರತಿ ವರ್ಷ ದೇವಸ್ಥಾನದಲ್ಲಿ ಕಾರ್ತೀಕ ಮಾಸ ಹಾಗೂ ಶ್ರಾವಣ ಮಾಸದಲ್ಲಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಮಾಡಲಾಗುತ್ತದೆ.ಭಕ್ತರ ಇಷ್ಟಾರ್ಥವನ್ನು ಹಿಡೇರಿಸುವುದರ ಫಲವಾಗಿ ಭಕ್ತರು ಸೇವಾ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.ಇವರುಗಳಿಗೆ ಭಗವಂತ್ತ ಮತ್ತಷ್ಟು ಒಳಿತನ್ನು ಮಾಡಲಿ ಎಂದರು.

ರಾತ್ರಿ ಸ್ವಾಮಿಯ ಕಥಾ ಪಾರಾಯಣ ಮಾಡಿಸಲಾಯಿತು.ಪೂಜಾ ಕೈ ಕರ್ಯ ಮತ್ತು ಧಾರ್ಮಿಕ ಕಾರ್ಯಗಳನ್ನು ವೇದಮೂರ್ತಿ ತೋಟಪ್ಪ ಶಾಸ್ತ್ರಿ ನೆರವೇರಿಸಿ ಕೊಟ್ಟರು. ನೆರೆದಿದ್ದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಹ ಅರ್ಚಕರಾದ ಪ್ರಸನ್ನ, ಅರುಣ್,ಪುರಸಭೆ ಸದಸ್ಯ ಶ್ಯಾಮ್, ಮುಖಂಡರಾದ ಚಿಕ್ಕ ಮಹದೇವ್, ನಾಗಣ್ಣ, ಗೋಪಾಲ,ಮಾದಪ್ಪಣ್ಣ,ಮರಿ ಲಿಂಗಯ್ಯ,ವೀರ ಭದ್ರಯ್ಯ,ಮರಿ ಕಾಳಯ್ಯ ಸೇರಿದಂತ್ತೆ ಇತರರಿದ್ದರು.

RELATED ARTICLES
- Advertisment -
Google search engine

Most Popular