ಉಡುಪಿ: ಮೂರು ವರ್ಷದ ಹಿಂದೆ ನಡೆದಿದ್ದ ಗೃಹಿಣಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆ ಕೊಲೆ ಮಾಡಿ ವಿದೇಶಕ್ಕೆ ಹೋಗಿ ತಲೆ ಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಏರ್ ಪೋರ್ಟ್ ನಲ್ಲಿ ಆರೋಪಿ ಕಾಣಿಸಿಕೊಳ್ಳುತ್ತಿದ್ದಂತೆ ಬಂಧಿಸಲಾಗಿದೆ. ಸದ್ಯ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
2021ರ ಜುಲೈನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಕುಮ್ರಗೋಡುವಿನ ಪ್ಲಾಟ್ ನಲ್ಲಿ ಗೃಹಿಣಿ ವಿಶಾಲ ಗಾಣಿಗ ಹತ್ಯೆ ಮಾಡಲಾಗಿತ್ತು. ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಕೊಲೆ ಆರೋಪಿ ವಿಶಾಲ ಗಾಣಿಗ ಪತಿ ರಾಮಕೃಷ್ಣ, ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಲಾಗಿತ್ತು. ಕೊಲೆಗೆ ಸಹಕರಿಸಿದ ಧರ್ಮೇಂದ್ರ ಕುಮಾರ್ ಸುಹಾನಿ ವಿದೇಶಕ್ಕೆ ಪರಾರಿಯಾಗಿದ್ದ. ಸದ್ಯ ಮೂರು ವರ್ಷದ ಬಳಿಕ ಮೂರನೇ ಆರೋಪಿಯನ್ನೂ ಬಂಧಿಸಲಾಗಿದೆ. ಲಕ್ನೋಗೆ ತೆರಳಿದ್ದ ಬ್ರಹ್ಮಾವರ ಎಎಸೈ ಶಾಂತಾರಾಜ ಮತ್ತು ಕಾನ್ಸ್ಟೇಬಲ್ ಸುರೇಶ್ ಬಾಬು ಅವರ ಕಣ್ಣಿಗೆ ಆರೋಪಿ ಮೂರು ವರ್ಷದ ಬಳಿಕ ಲಕ್ನೋ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಪೊಲೀಸರು ಅಲರ್ಟ್ ಆಗಿ ಬಂಧಿಸಿದ್ದಾರೆ.