Tuesday, February 17, 2026
Google search engine

Homeಅಪರಾಧನಿಯಂತ್ರಣ ತಪ್ಪಿ ರಸ್ತೆ ಬದಿ ಕಟ್ಟೆಗೆ ಬಿದ್ದ ಕಾರು: ನಾಲ್ವರಿಗೆ ಗಾಯ

ನಿಯಂತ್ರಣ ತಪ್ಪಿ ರಸ್ತೆ ಬದಿ ಕಟ್ಟೆಗೆ ಬಿದ್ದ ಕಾರು: ನಾಲ್ವರಿಗೆ ಗಾಯ

ರಾಮನಗರ: ಎಕ್ಸ್ ಪ್ರೆಸ್ ಹೈವೇಯಿಂದ ಸರ್ವೀಸ್ ರಸ್ತೆಗೆ ತಿರುಗಿದ ಕಾರು ಆಯತಪ್ಪಿ ರಸ್ತೆ ಬದಿಯಲ್ಲಿದ್ದ ಕಟ್ಟೆಗೆ ಬಿದ್ದು ನಾಲ್ಕು ಮಂದಿ ಗಾಯಗೊಂಡ ಘಟನೆ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದ ಸಂಕಲಗೆರೆ ಗೇಟ್ ಬಳಿ ನಡೆದಿದೆ.

ಸಂಕಲಗೆರೆ ಗೇಟ್ ಬಳಿಯಿರುವ ಮೊಸರು ಕಟ್ಟೆಗೆ ಕಾರು ಬಿದ್ದಿದೆ. ಶನಿವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಎಕ್ಸ್ ಪ್ರೆಸ್ ಹೈವೇಯಿಂದ ಸಂಕಲಗೆರೆ ಗೇಟ್ ಬಳಿ ಸರ್ವೀಸ್ ರಸ್ತೆಗೆ ಬಂದ‌ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಕ್ಕದಲ್ಲಿದ್ದ ಕಟ್ಟೆಗೆ ಬಿದ್ದಿದೆ.

ಮೊಸರು ಕಟ್ಟೆಯಲ್ಲಿ ನೀರು ಖಾಲಿಯಾಗಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -
Google search engine

Most Popular