Monday, May 26, 2025
Google search engine

Homeರಾಜ್ಯ14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ಬೆಳೆಯಾಗಿ ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು, ಪ್ರತಿ ಕ್ವಿಂಟಾಲ್‌ಗೆ ಶೇ ೫.೩೫ರಂತೆ ೨,೩೦೦ಕ್ಕೆ ಹೆಚ್ಚಿಸಿದೆ.

ಇದರಂತೆ ಇತರ ೧೩ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಸರ್ಕಾರ ಹೆಚ್ಚಿಸಿದೆ. ಸರ್ಕಾರಿ ಗೋದಾಮಿನಲ್ಲಿ ಅಕ್ಕಿಯ ದಾಸ್ತಾನು ಸಾಕಷ್ಟು ಇರುವಾಗಲೇ, ಭತ್ತಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ೧೧೭ರಷ್ಟು ಹೆಚ್ಚಳ ಮಾಡಿರುವುದರ ಹಿಂದೆ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯ ಲೆಕ್ಕಾಚಾರವಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಮೊದಲ ನಿರ್ಧಾರವಾಗಿ, ಬೆಂಬಲ ಬೆಲೆಯು ಒಟ್ಟು ಉತ್ಪಾದನಾ ವೆಚ್ಚಕ್ಕಿಂತ ಶೇ ೧.೫ರಷ್ಟು ಇರಬೇಕು ಎಂಬ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕಳೆದ ಸಾಲಿಗೆ ಹೋಲಿಸಿದಲ್ಲಿ ೩೫ ಸಾವಿರ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಹೀಗಾಗಿ ಇದರ ಒಟ್ಟು ಮೊತ್ತ ೨ಲಕ್ಷ ಕೋಟಿಯಾಗಿದೆ’ ಎಂದು ಮಾಹಿತಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸಾಮಾನ್ಯ ಶ್ರೇಣಿಗೆ ೧೧೭ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ ೨,೩೦೦), ಎ ಶ್ರೇಣಿ- ೨,೩೨೦ ಹೈಬ್ರೀಡ್ ಜೋಳ: ೧೯೧ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ ೩,೩೭೧)ಮಾಲ್ದಾನಿ: ೧೯೬ರಷ್ಟು ಹೆಚ್ಚಳ (ಕ್ವಿಂಟಾಲ್‌ಗೆ ೩,೪೨೧) ಹತ್ತಿ: ಪ್ರತಿ ಕ್ವಿಂಟಲ್ ಸಾಮಾನ್ಯ ತಳಿಯ ಹತ್ತಿಗೆ ನೀಡುವ ಎಂಎಸ್‌ಪಿಯನ್ನು ೭,೧೨೧ಕ್ಕೆ ಹಾಗೂ ಮತ್ತೊಂದು ತಳಿ ಹತ್ತಿ ಎಂಎಸ್‌ಪಿಯನ್ನು ೭,೫೨೧ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಹತ್ತಿಗೆ ನೀಡುವ ಎಂಎಸ್‌ಪಿಯನ್ನು ಕಳೆದ ಬಾರಿಗಿಂತ ೫೧೦ ರಷ್ಟು ಹೆಚ್ಚಿಸಿದಂತಾಗಿದೆ. ರಾಗಿ-೪,೨೯೦, ಸಜ್ಜೆ, ೨,೬೨೫ ಹಾಗೂ ಮೆಕ್ಕೆಜೋಳಕ್ಕೆ ೨,೨೨೫ ಎಂಎಸ್‌ಪಿ ನಿಗದಿ ಮಾಡಲಾಗಿದೆ.

ಬೇಳೆಕಾಳುಗಳಿಗೆ ನೀಡುವ ಎಂಎಸ್‌ಪಿಯನ್ನು ಸಹ ಹೆಚ್ಚಿಸಲಾಗಿದೆ. ಹೆಸರು ಕಾಳಿಗೆ ೮,೬೮೨ ನಿಗದಿ ಮಾಡಲಾಗಿದ್ದರೆ, ತೊಗರಿ-೭,೫೫೦ ಹಾಗೂ ಉದ್ದಿಗೆ ೭,೪೦೦ ನಿಗದಿ ಮಾಡಲಾಗಿದೆ. ಪ್ರತಿ ಕ್ವಿಂಟಲ್‌ಗೆ ಕಳೆದ ವರ್ಷ ನಿಗದಿ ಮಾಡಿದ್ದ ದರಕ್ಕಿಂತ ೫೫೦ ಹೆಚ್ಚಳ ಮಾಡಿದಂತಾಗಿದೆ.

RELATED ARTICLES
- Advertisment -
Google search engine

Most Popular