Tuesday, May 20, 2025
Google search engine

Homeರಾಜ್ಯಸುದ್ದಿಜಾಲಜಗತ್ತಿನಲ್ಲಿ ಸರ್ವರೂ ಜ್ಞಾನಿಗಳು ಮತ್ತು ಬುದ್ದಿವಂತರಾಗಲು ಶಿಕ್ಷಕರ ಕೊಡುಗೆ ಅಪಾರ-ಕೆ.ಪಿ.ಜಗದೀಶ್

ಜಗತ್ತಿನಲ್ಲಿ ಸರ್ವರೂ ಜ್ಞಾನಿಗಳು ಮತ್ತು ಬುದ್ದಿವಂತರಾಗಲು ಶಿಕ್ಷಕರ ಕೊಡುಗೆ ಅಪಾರ-ಕೆ.ಪಿ.ಜಗದೀಶ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಜಗತ್ತಿನಲ್ಲಿ ಸರ್ವರೂ ಜ್ಞಾನಿಗಳು ಮತ್ತು ಬುದ್ದಿವಂತರಾಗಲು ಶಿಕ್ಷಕರ ಕೊಡುಗೆ ಅಪಾರವಾಗಿದ್ದು ನಾವು ಅವರನ್ನು ನಿತ್ಯವೂ ಗೌರವಿಸಿ ಪೂಜ್ಯ ಮನೋಭಾವನೆಯಿಂದ ನೋಡಬೇಕು ಎಂದು ದೊಡ್ಡೇಕೊಪ್ಪಲು ಗ್ರಾ.ಪಂ. ಸದಸ್ಯ ಕೆ.ಪಿ.ಜಗದೀಶ್ ಹೇಳಿದರು.

ಪಟ್ಟಣದ ಕಾಳೇನಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ವತಿಯಿಂದ ಶಿಕ್ಷಕ ಭಾಂದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಮಗೆ ಅಕ್ಷರ ಕಲಿಸಿ ತಿದ್ದಿ ತೀಡಿದ ಗುರುಗಳು ದೇವರಿಗೆ
ಸಮಾನ ಎಂದರು.

ಎಲ್ಲಾ ನೌಕರಿ ಮತ್ತು ಹುದ್ದೆಗಳಿಗಿಂತ ಶಿಕ್ಷಕ ವೃತ್ತಿ ಹೆಚ್ಚು ಎತ್ತರ ಸ್ಥಾನದಲ್ಲಿದ್ದು ಗುರು ಮತ್ತು ಶಿಷ್ಯರ ಸಂಬoಧ ಹಾಗೂ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗಾಗಿ ಪೋಷಕರಿಗಿಂತ ಅಗ್ರ ಸ್ಥಾನವನ್ನು ನಾವು ನಮ್ಮ ಗುರುಗಳಿಗೆ ನೀಡಬೇಕಿದ್ದು ನಮಗೆ ಸರ್ವಸ್ವವೂ ಅಕ್ಷರ ಕಲಿಸಿದವರು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರಿಗೂ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ನೆನಪಿನ ಕಾಣಿಕೆ ನೀಡಿ ಕಾಲಿಗೆರಗಿ ಆಶೀರ್ವಾದ ಪಡೆದು ಸಂತಸದ ಕ್ಷಣಗಳನ್ನು ಕಣ್ತುಂಬಿಕೊoಡರು.

ಎಸ್‌ಡಿಎಂಸಿಸದಸ್ಯರಾದ ಉದಯಶಂಕರ್, ಕೆ.ಚಂದ್ರು, ಗಜೇಂದ್ರ, ಕೆ.ಜೆ.ಮಂಜುನಾಥ, ಶಿಲ್ಪಧರ್ಮ, ಶೈಲಮಧುಚಂದ್ರ, ಕೆ.ಸಿ.ಹರೀಶ್, ಕವಿತ, ಹೊಸಕೋಟೆಚಲುವರಾಜು, ಸಣ್ಣಪ್ಪ, ಮುಖ್ಯ ಶಿಕ್ಷಕಿ ರುಕ್ಮಿಣಿ, ಶಿಕ್ಷಕರಾದ ಶಶಿಕಲಾ, ರಶ್ಮಿ, ಶಾಂತಿಮತಿ, ಪುಷ್ಪಲತಾ, ದೀಪ್ತಿ, ಅನಿತಾ, ಮಮತಾ, ರಿಜಿಕ್, ಲೋಕೇಶ್, ಹರೀಶ್, ಮುರುಳಿ, ಶಿಲ್ಪ. ನವ್ಯ, ಅಂಬಿಕಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular