ಮೈಸೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು-2016ರನ್ವಯ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ 2025ರ ಎ.1ರಿಂದ ಫೆ.10ರವರೆಗೆ ನಗರದಲ್ಲಿ ಬರೋಬ್ಬರಿ 14.35,500ರೂ. ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು 189000 ರೂ., ಮನೆ ಮನೆಗಳಿಂದ ಮಿಶ್ರ ತ್ಯಾಜ್ಯ ನೀಡುವವರಿಗೆ 13600 ರೂ., ವಾಣಿಜ್ಯ ಮನೆಗಳಿಂದ ಮಿಶ್ರ ತ್ಯಾಜ್ಯ ನೀಡುವವರಿಗೆ 66000 ರೂ., ವಲಸು ನೀರು ಹಾಗೂ ಇನ್ನಿತರೆ ದ್ರವ್ಯ ತ್ಯಾಜ್ಯವನ್ನು ರಸ್ತೆಗಳಿಗೆ ಹರಿಯಬಿಟ್ಟಿರುವುದು 9500 ರೂ., ಪ್ರಾಣಿ ತ್ಯಾಜ್ಯವನ್ನು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಇರುವುದು 3500ರೂ., ಕಟ್ಟಡ ಭಗ್ನಾವಶೇಷ ತ್ಯಾಜ್ಯವನ್ನು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡದೇ ಇರುವುದು 55000, ತೆರೆದ ಚರಂಡಿಗಳಲ್ಲಿ ತ್ಯಾಜ್ಯ ಬಿಸಾಡುವುದು 9000, ರಸ್ತೆ ಬದಿಗಳಲ್ಲಿ ಎಲೆಗಳನ್ನು ಸುಡುವುದು 700, ಪ್ಲಾಸ್ಟಿಕ್ ವಸ್ತು ಮತ್ತು ಒಣತ್ಯಾಜ್ಯ ಸುಡುವುದು 6000, ನಿಷೇಧಿತ ಏಕ ಬಳಕೆ ಪ್ಲಾಸ್ಟಾಕ್ ಬಳಸುವವರಲ್ಲಿ ಸಾರ್ವಜನಿಕರಿಗೆ 23200ರೂ., ಬೀದಿಬದಿ ವ್ಯಾಪಾರಿಗಳಿಗೆ 405000 ರೂ., ವಾಣಿಜ್ಯದಾರರಿಗೆ 530000 ರೂ., ಉದ್ದಿಮೆದಾರರು (ಮಾರಾಟ ಮತ್ತು ವಿತರಣಿ) 125000 ರೂ. ಸೇರಿ ಒಟ್ಟು 14.35,500 ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.



