ಹುಣಸೂರು: ಮನುಷ್ಯನಿಗೆ ಕಣ್ಣು ಮನೆಯ ಹೆಬ್ಬಾಗಿಲಿನಂತೆ, ಅದನ್ನ ಜೋಪಾನವಾಗಿ ಕಾಪಾಡಿಕೊಳ್ಳಿ ಎಂದು ಗಾವಡಗೆರೆ ಗುರುಲಿಂಗ ಜಂಗಮಮಠದ ಶ್ರೀ ನಟರಾಜಸ್ವಾಮಿ ತಿಳಿಸಿದರು.
ನಗರದ ತಾಲೂಕು ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ, ಹುಣಸೂರು ರೋಟರಿ ಕ್ಲಬ್ , ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಕುಟುಂಬ, ಪತ್ರಿಕೆ ಹಂಚುವ ಹುಡುಗರು, ಮತ್ತು ಆದಿವಾಸಿಗಳಿಗೆ ಉಚಿತ ನೇತ್ರ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನ ಅವಿ ಬಾಜ್ಯಾಂಗಗಳಲ್ಲಿ ಕಣ್ಣು ಕೂಡ ಒಂದು ಅದನ್ನು ತುಂಬ ಜಾಗೃತವಾಗಿ ನೋಡಿಕೊಳ್ಳಬೇಕೆಂದರು.
ಕಣ್ಣು ಮಾತ್ರ ಸುಖವನ್ನು ಅನುಭವಿಸುವುದಿಲ್ಲ ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಸೆರೆ ಹಿಡಿದು. ದಾಖಲಿಸುತ್ತ ಮನಸನ್ನು ಖುಷಿಯಿಂದ ಇರಿಸಿ. ಉಲ್ಲಾಸಿದಿಂದ ಇರಲು ಸಹಕಾರಿಯಾಗುತ್ತದೆ ಎಂದರು.
ಸಂಪತ್ತು ಇದ್ದರೆ ಆರೋಗ್ಯವಲ್ಲ ಆರೋಗ್ಯವಿದ್ದರೆ ಸಂಪತ್ತಿನ ಸುಖ ಗೊತ್ತಾಗಯವುದು. ಆದರೆ ಮನುಷ್ಯ ಭ್ರಮೆಯಲ್ಲಿ ಸಂಪತ್ತನು ಕಾಯಲು ತಮ್ಮ ಹಿಡೀ ಜೀವನ ಮೀಸಲಿಟ್ಟು ಸಂತಸವನ್ನು ಕೈ ಚೆಲ್ಲುತ್ತಾರೆ. ಆದರೆ ಪತ್ರಿಕೋದ್ಯಮ ಸಮಾಜ ತಿದ್ದುವ ಜತೆಗೆ. ಪತ್ರಕೆ ಹಂಚುವ ಮಕ್ಕಳಿಗೆ, ಆದಿವಾಸಿಗಳಿಗೆ ಆರೋಗ್ಯ ನೀಡುವ ವಿಚಾರ ಸಂತಸ ತಂದಿದೆ. ಹಾಗೆ ಪತ್ರಿಕೆಯನ್ನು ಹಂಚಿ ಈ ದೇಶದ ರಾಷ್ಟ್ರಪತಿಯಾದ ಡಾ.ಅಬ್ದುಲ್ ಕಲಾಂ ನಮ್ಮ ಕಣ್ಣ ಮುಂದಿದ್ದಾರೆ. ಯಾವುದೇ ಕೆಲಸ ಕೀಳಲ್ಲ ಶ್ರದ್ಧೆಯಿಂದ ಮಾಡಬೇಕೆಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಪತ್ರಕರ್ತರು, ಪತ್ರಿಕೆ ಹಂಚುವ ಹುಡುಗರು ಪ್ರತಿನಿತ್ಯ ಒತ್ತಡದಲ್ಲಿ ಬದುಕುತ್ತಿದ್ದಾರೆ. ಜತೆಗೆ ಗ್ರಾಮೀಣ ಭಾಗದಲ್ಲಿ ಕೆಲಸಮಾಡುವ ಪತ್ರಕರ್ತರು ಆರ್ಥಿಕವಾಗಿ, ಸದೃಢರಲ್ಲದ ಕಾರಣ ಅವರಿಗೂ ಸರಕಾರಿ ಸೌಲಭ್ಯಗಳು ಅಗತ್ಯವಿದೆ. ಅದು ಸಿಗದ ಕಾರಣ. ಶಂಕರ ಕಣ್ಣಿನ ಆಸ್ಪತ್ರೆಯಂತವರಿಂದ ಉಚಿತ ಶಿಬಿರ ಹಮ್ಮಿಕೊಂಡಿದ್ದೇವೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನ ಕೆ.ಪಿ. ಮಾತನಾಡಿ, ಇತ್ತೀಚೆಗೆ ನಾವುಗಳು ತಂತ್ರಜ್ಞಾನದ ಕೈಗೊಂಬೆಗಳಾಗಿದ್ದೇವೆ. ಇಪ್ಪತು ವರ್ಷಗಳ ಹಿಂದೆ ಟಿವಿ, ಮೊಬೈಲ್, ಕಂಪ್ಯೂಟರ್ ಕಮ್ಮಿ ಇತ್ತು. ಈಗ ಮಕ್ಕಳ ಜತೆಗೆ ತಂದೆ ತಾಯಿಗಳು ಕೂಡ ಮೊಬೈಲ್ ಹಿಂದೆ ಬಿದ್ದು ಕಣ್ಣಿಗೆ ಮಾರಕವಾಗಿದ್ದೇವೆ. ಅದರ ಜತೆಗೆ. ಆಹಾರ ಪದ್ದತಿಯೂ ಕಾರಣವಾಗಿದೆ. ಸೊಪ್ಪು, ತರಕಾರಿ, ಹಣ್ಣು ಸೇವಿಸದೆ. ಗೋಬಿ, ಪಾನಿಪುರಿ ಹಿಂದೆ ಬಿದ್ದು, ಆರೋಗ್ಯವನ್ನು ನಿರ್ಲಕ್ಷಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಂಕರ ಕಣ್ಣಿನ ಆಯೋಜಕರಾದ ಹೆಚ್.ಸಿ.ಕುಮಾರ್, ಜಾಬಗೆರೆ ಸದೃಢ ಮಂಜುನಾಥ್, ರೊ. ಸಹಾಯಕ ಗೌರ್ನರ್ ಆನಂದ್ ಆರ್.ವಲಯ ಸೇನಾನಿ ಪಾಂಡುಕುಮಾರ್ ಪಿ. ಡಾ.ವಿಲೀನ, ಡಾ.ಶ್ರೀಕಾಂತ್, ಪತ್ರಕರ್ತರಾದ ದಾರಾ ಮಹೇಶ್, ನಟರಾಜ್ ಹನಗೋಡು, ಹೆಚ್.ಕೆ ಕೃಷ್ಣ, ಕೆ.ಕೃಷ್ಣ, ಖಜಾಂಚಿ ಯೋಗಿ, ಮನು, ಜಯರಾಂ, ಕಾರ್ಯದರ್ಶಿ ಶಂಕರ್, ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವ್ ನೇರಳಕುಪ್ಪೆ ಇದ್ದರು.