ವಿನಯ್ ದೊಡ್ಡಕೊಪ್ಪಲು
ಕೆ.ಆರ್ .ನಗರ : ಗೃಹ ಲಕ್ಷ್ಮಿಯ 2 ಸಾವಿರ ರೂಪಾಯಿ ನೀಡಲು ಸರ್ಕಾರದ ಬಳಿ ಹಣ ಇಲ್ಲದೇ ಜನ ಉಪಯೋಗಿ ವಸ್ತುಗಳ ಬೆಲೆಯನ್ನು ಏರಿಸಿ ಜನ ಸಾಮಾನ್ಯರಿಗೆ ಬರೆ ಎಳಿದಿದ್ದೆ ಈಗಿನ ಕಾಂಗ್ರೇಸ್ ಸರ್ಕಾರದ ಸಾಧನೆಯಾಗಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಶ್ರೀರಾಮಪುರ ಗ್ರಾಮಸ್ಥರು ತಮಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಹುಟ್ಟು ಹಬ್ಬದ ಅಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆ.ಅರ್.ನಗರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಅನುಧಾನವನ್ನು ನೀಡಿದ್ದರು ಅದರೆ ಈಗಿನ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಎಷ್ಟು ಅನುಧಾನ ನೀಡಿದ್ದಾರೆ ಅವರು ನೀಡಿರುವ ಅನುಧಾನ ಪ್ರಚಾರಕ್ಕೆ ಅಷ್ಟೆ ಸೀಮಿತವಾಗಿದೆ ಎಂದರು.
ತಾವು ಶಾಸಕರಾಗಿದ್ದ ಶ್ರೀರಾಮಪುರ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಜೂರು ಅಗಿದ್ದ ಕಾಮಗಾರಿಗಳನ್ನು ಬೇರೆ ಗ್ರಾಮಗಳಿಗೆ ಬದಲಾಯಿಸುತ್ತಿದ್ದು ಇದಕ್ಕೆ ಮಂಡಿಗನಹಳ್ಳಿ ಏತ ನೀರಾವರಿ ಯೋಜನೆಯನ್ನು ಕಾಳೇನಹಳ್ಳಿಗೆ ವರ್ಗಾಯಿಸಿ ಅಭಿವೃದ್ಧಿಯಲ್ಲಿಯು ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭವಾಗದೇ ರೈತರು ಕಬ್ಬನ್ನ ಬೇರೆ ಕಾರ್ಖಾನೆಗೆ ಸಾಗಿಸುತ್ತಿದ್ದು ಕಳೆದ ಬಾರಿ 160 ರೂ ಪ್ರತಿ ಟನ್ ಗೆ ಸಾಗಾಣಿಕೆ ವೆಚ್ಚ ಇತ್ತು ಈ ಬಾರಿ 280 ರೂ ಸಾಗಾಣಿಕೆ ವೆಚ್ಚ ದೂಬಾರಿ ಅಗುತ್ತಿದ್ದು ರೈತರ ಹಿತಕಾಯ ಬೇಕಾದವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ತಾಯಿ ಗ್ರಾಮ ಶ್ರೀರಾಮಪುರದ ತಮ್ಮ ಬಾಲ್ಯದ ನೆನಪು ಮಾಡಿಕೊಂಡ ಸಾ.ರಾ.ಮಹೇಶ್ ಇಂದೇ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನೌಕರರಾಗಿ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ಅನುಸೂಯ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ಆರ್.ಸಂತೋಷ್, ಸಿದ್ದಾಪುರ ಗ್ರಾ.ಪಂ.ಸದಸ್ಯ ಎಸ್.ಕೆ. ಅಭಿಲಾಷ್, ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಪ್ರಶನ್ನ, ಎಸ್.ಬಿ.ಶಿವಣ್ಣ, ಡೈರಿ ಮಾಜಿ ಅಧ್ಯಕ್ಷ ಎಸ್.ಟಿ.ನಾರಾಯಣ್,ಸದಸ್ಯ ಹರೀಶ್ ಬಾಬು, ಮುಖಂಡರಾದ ಬೋಜೆಗೌಡ, ರಾಘುಕರೀಗೌಡ, ಭಾಸ್ಕರ್, ರಾಮು,ಕುಬೇರ, ಎಚ್.ಎಸ್.ರಾಜು, ಎಂ.ಎಸ್.ರಾಮಚಂದ್ರ,ಚಂದನ್ ಗೌಡ, ಸತ್ಯನಾರಾಯಣ, ಯಶವಂತ್ ಗೌಡ,ಎಸ್.ಎಸ್.ಬಾಲರಾಜ್,ಹೋಟೇಲ್ ಸತೀಶ್, ಶಿವರುದ್ರ, ಎಸ್.ಪಿ.ಮಂಜುನಾಥ್, ಮನೋಹರ್ , ಮಣಿಶ್ರೀ, ಹೊಸೂರು ಸೊಸೈಟಿ ಅಧ್ಯಕ್ಷ ಎಚ್.ಎಸ್.ಜಗದೀಶ್, ವಕೀಲ ತಿಮ್ಮಪ್ಪ, ಹೆಬ್ಬಾಳು ಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು