Wednesday, July 9, 2025
Google search engine

Homeರಾಜ್ಯಸುದ್ದಿಜಾಲಅರಿಕುಠಾರ ಗ್ರಾಮ ಚಾಮರಾಜನಗರವಾಗಿ ನಾಮಕರಣ ಮಾಡಿ ವಿಶ್ವಖ್ಯಾತಿ ಗೊಳಿಸಿದವರು ಮೈಸೂರು ಮಹಾರಾಜರು- ಸುರೇಶ್ ಎನ್.ಋಗ್ವೇದಿ

ಅರಿಕುಠಾರ ಗ್ರಾಮ ಚಾಮರಾಜನಗರವಾಗಿ ನಾಮಕರಣ ಮಾಡಿ ವಿಶ್ವಖ್ಯಾತಿ ಗೊಳಿಸಿದವರು ಮೈಸೂರು ಮಹಾರಾಜರು- ಸುರೇಶ್ ಎನ್.ಋಗ್ವೇದಿ

ಚಾಮರಾಜನಗರ: ಚಾಮರಾಜನಗರ ನಿರ್ಮಾಣದ ಇತಿಹಾಸ ತಿಳಿಯೋಣ. ಶ್ರೀ ಚಾಮರಾಜೇಶ್ವರ ರಥೋತ್ಸವದ ಹಿನ್ನೆಲೆ ವಿಶೇಷವಾಗಿದ್ದು ,ಇತಿಹಾಸ ಪರಂಪರೆ, ಸಂಸ್ಕೃತಿಯ ಅರಿವಿನ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್.ಋಗ್ವೇದಿ ಹೇಳಿದರು.

ಜುಲೈ 10 ಗುರುವಾರ ನಗರದಲ್ಲಿ ನಡೆಯುವ ಶ್ರೀಚಾಮರಾಜೇಶ್ವರ ರಥೋತ್ಸವ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಚಾಮರಾಜೇಶ್ವರಸ್ವಾಮಿಯನ್ನು ಭಕ್ತಿಯಿಂದ ನಮಿಸೋಣ, ಮಹಾರಾಜರನ್ನು ಸ್ಮರಿಸೋಣ, ಇತಿಹಾಸ ತಿಳಿಯೋಣ ಕಾರ್ಯಕ್ರಮದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ಮೈಸೂರು ಪರಂಪರೆಯ ನಾಡದೊರೆಗಳ ಋಣಭಾರದಲ್ಲಿರುವ ಚಾಮರಾಜನಗರದವರಾದ ನಾವೆಲ್ಲರೂ ಅವರನ್ನು ಸ್ಮರಿಸಿಬೇಕು. ಅರಿಕುಠಾರವಾಗಿದ್ದ ಗ್ರಾಮವನ್ನು ಇಡೀ ವಿಶ್ವಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿ ಅತ್ಯಂತ ಶ್ರೇಷ್ಠವಾದ ಚಾಮರಾಜೇಶ್ವರ ದೇವಾಲಯ ನಿರ್ಮಾಣ ಮಾಡಿ, ಶಿವಲಿಂಗ ಪ್ರತಿಷ್ಠಾಪಿಸಿ, ಶೃಂಗೇರಿ ಗುರುಗಳ ಆಶೀರ್ವಾದಿಂದ ಸ್ಥಾಪನೆಗೊಂಡಿತು. ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ ವಿಶೇಷವಾಗಿ ಲಕ್ಷಾಂತರ ಜನರ ನೆಲೆಗೆ ಕಾರಣೀಭೂತವಾಗಿದೆ.ಪ್ರತಿ ಮನೆಮನೆಗಳಲ್ಲೂ ಶ್ರೀಚಾಮರಾಜೇಶ್ವರಸ್ವಾಮಿಯನ್ನು ಭಕ್ತಿಯಿಂದ ನಮಿಸುವ ಮೂಲಕ ಮೈಸೂರು ಪರಂಪರೆಗೆ ಸದಾ ಕಾಲ ಗೌರವ ಸಲ್ಲಿಸಬೇಕು. ವೇದ , ಸಾಹಿತ್ಯ, ನೃತ್ಯ, ನಾಟಕ, ವಿಜ್ಞಾನ ಕೃಷಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ವಿಶ್ವ ಪ್ರಸಿದ್ಧಿ ಪಡೆದಿರುವ ಸಾಧಕರು ಚಾಮರಾಜನಗರದಲ್ಲಿ ಇದ್ದಾರೆ ಎಂದು ತಿಳಿಸಿದರು.

ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆರ್ಚಕ ರಾಮಕೃಷ್ಣ ಭರದ್ವಾಜ್ ರವರು ಮೈಸೂರು ಮಹಾರಾಜರ ಭಾವಚಿತ್ರಗಳಿಗೆ ಪುಷ್ಪಾರ್ಪಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ರಥೋತ್ಸವದ ಸಂದರ್ಭದಲ್ಲಿ ಚಾಮರಾಜನಗರ ಇತಿಹಾಸ ತಿಳಿಸೋಣ ಮಹಾರಾಜರನ್ನು ನಮಿಸೋಣ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ . ಯುವ ಸಮುದಾಯಕ್ಕೆ ರಥೋತ್ಸವದ ಜೊತೆಗೆ ಇತಿಹಾಸ ಪರಂಪರೆಯನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು .

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾನಗೌಡ ಮಾತನಾಡಿ ಶ್ರೀ ಚಾಮರಾಜೇಶ್ವರ ದೇವಾಲಯದ ರಥೋತ್ಸವ ಆಷಾಡ ಮಾಸದಲ್ಲಿ ವಿಶೇಷವಾಗಿ ನಡೆಯಲಿದೆ ವಿಶೇಷವಾಗಿ ದಂಪತಿಗಳು ರಥೋತ್ಸವಕ್ಕೆ ಆಗಮಿಸಿ, ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ವಿಶೇಷ ರಥೋತ್ಸವ ಇದಾಗಿದೆ ಮೈಸೂರು ಮಹಾರಾಜರು 200 ವರ್ಷಗಳ ಹಿಂದೆ ದೇವಾಲಯವನ್ನು ಸ್ಥಾಪಿಸಿ ರಥೋತ್ಸವದ ಪರಂಪರೆಗೆ ನಾಂದಿ ಹಾಕಿರುವ ಚಾಮರಾಜೇಶ್ವರ ರಥೋತ್ಸವ ಇಂದು ವೈಭವದಲ್ಲಿ ಜರುಗುತ್ತಿರುವುದು ಕಾಣಬಹುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾದ ಶಿವಲಿಂಗ ಮೂರ್ತಿ , ಬಿ ಕೆ ಆರಾಧ್ಯ , ಸರಸ್ವತಿ, ಪದ್ಮಾಪುರುಷೋತ್ತಮ್, ಕನ್ನಡ ಸಂಘಟನೆ ಮುಖಂಡರಾದ ಪಣ್ಯದಹುಂಡಿ ರಾಜು, ಅಂಬರೀಶ್, ರಾಜಗೋಪಾಲ್ , ವೀರಶೆಟ್ಟಿ ಇದ್ದರು.

RELATED ARTICLES
- Advertisment -
Google search engine

Most Popular