ರಾಮನಗರ: ಕೆ.ವಿ.ಎಸ್, ಶಿಕ್ಷಣ ಸಚಿವಾಲಯದ ನಿರ್ದೇಶನದಅಡಿಯಲ್ಲಿ ಭಾರತ ಸರ್ಕಾರವುಚಿತ್ರಕಲೆ ಸ್ಪರ್ಧೆ, ಪಿಪಿಸಿ-೨೦೨೪ (ಪರೀಕ್ಷಾ ಪೇ ಚರ್ಚಾ ೨೦೨೪) ಅನ್ನುಚಂದ್ರಯಾನ, ಭಾರತದಕ್ರೀಡಾಯಶಸ್ಸು, ವಿಕಾಸ್ ಭಾರತ್, ನೇತಾಜಿ ಸುಭಾಷಚಂದ್ರ ಬೋಸ್ ಮತ್ತು ಆದಿತ್ಯ ಎಲ್ ನಂತಹ ವಿಭಿನ್ನ ವಿಷಯದ ಮೇಲೆ ಆಯೋಜಿಸಲಾಗಿತ್ತು. ಕೆವಿ, ಜೆಎನ್‌ವಿ ಮತ್ತು ಇತರ ಹಲವು ಸಿಬಿಎಸ್‌ಇ/ರಾಜ್ಯ ಶಾಲಾ ಮಕ್ಕಳು/ವಿದ್ಯಾರ್ಥಿಗಳು ಸುಮಾರು ೭೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಂಬರುವ ಸವಾಲುಗಳು ಮತ್ತು ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ಈ ಸ್ಪರ್ಧೆಯನ್ನು ಚನ್ನಪಟ್ಟಣದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮಹೇಶ್‌ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಚನ್ನಪಟ್ಟಣದ ಸಮನ್ವಯಾಧಿಕಾರಿಕು ಸುಮಲತಾ, ಚನ್ನಪಟ್ಟಣದಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶೈಕ್ಷಣಿಕ ಸಂಯೋಜಕಯೋಗೀಶ್‌ಚಕ್ಕೆರೆ, ರಾಮನಗರದ ಅವ್ವೇರಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಲಾಶಿಕ್ಷಕ ಪೂರ್ಣಾನಂದಅವರು ಸ್ಪರ್ಧೆಗೆತೀರ್ಪುಗಾರರಾಗಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಮೆಚ್ಚುಗೆಯ ಪ್ರಮಾಣಪತ್ರವನ್ನುನೀಡಲಾಯಿತು ಮತ್ತು ೫ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳು ಮತ್ತು ಪ್ರಶಂಸನಾ ಪತ್ರವನ್ನುನೀಡಲಾಯಿತು.