ವರದಿ ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ : ಭಾರತೀಯರು ಸ್ವತಂತ್ರ ಪಡೆಯಲು ಕೇವಲ ಯುದ್ಧದಿಂದ ಸಾಧ್ಯವಿಲ್ಲ ಪ್ರತಿಯಾಗಿ ಅಹಿಂಸ ತತ್ವಗಳಿಂದ ಸ್ವತಂತ್ರ ಪಡೆಯಬಹುದೆಂದು ಮಹಾತ್ಮ ಗಾಂಧೀಜಿ ಅವರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಚಳುವಳಿಗಳನ್ನು ಪ್ರಾರಂಭಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜುಂಡ ನಂಜೇಗೌಡರವರು ತಿಳಿಸಿದರು.
ಶ್ರೀ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌತಿ ಯಲ್ಲಿ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದೇಶದಲ್ಲಿ ನಡೆಯುತ್ತಿರುವ ಶ್ವೇಚಾಚಾರ ಹಾಗೂ ಸಾಮಾಜಿಕ ಮೌಡ್ಯಗಳು ತಾಂಡವಾಡುತ್ತಿದೆ, ಇವುಗಳನ್ನು ಹೋಗಲಾಡಿಸಲು ಯುವಶಕ್ತಿಯಿಂದ ಸಾಧ್ಯ ಆದರಿಂದ ಯುವಜನತೆ ಎಚ್ಚೆತ್ತುಕೊಂಡು ತಮ್ಮ ಜೀವನದಲ್ಲಿ ದೇಶ ಪ್ರೇಮ, ಶಿಸ್ತು, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೆ ದೇಶದಲ್ಲಿರುವ ಶ್ವೇಚಾಚಾರ ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುತ್ತುರಾಜ್. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಗೌರಮ್ಮ, ಮುಖ್ಯ ಶಿಕ್ಷಕರಾದ ಆನಂದ್, ಲಕ್ಕಣ್ಣ, ಮೋಹನ್, ವೆಂಕಟೇಶ್ ಮುಖಂಡರಾದ ದೇವರಾಜ್. ನಾಗೇಶ್ ಸಿಸಿ. ಅಣ್ಣಪ್ಪ ಚೌತಿ. ವೈರ್ಮುಡಿ ಗೌಡ. ಮಹೇಶ್. ಸ್ವಾಮಿ. ತಮ್ಮಯ್ಯ. ಮಲ್ಲೇಶ್. ದರ್ಶನ್ ಉಪನ್ಯಾಸಕರು. ಲಕ್ಷ್ಮಣ್. ಮಾದ್ನಾಯ್ಕ. ಮೋಹನ್ ಪಿಡಿಒ. ಗೌರಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು.. ರವಿಚಂದ್ರ. ಸ್ವಾಮಿ. ಶೃತಿ. ಪ್ರಕಾಶ್. ರವಿಕುಮಾರ್. ಬಸಪ್ಪ. ಗುರುಮೂರ್ತಿ ಸೇರಿದಂತೆ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.