ಮಂಡ್ಯ : ಕರ್ನಾಟಕ ಬಂದ್ ಬೆಂಬಲಿಸಿ ಶ್ರೀರಂಗಪಟ್ಟಣದ ಗರುಡನ ಉಕ್ಕಡ ಗ್ರಾಮದ ಬಳಿ ಮೈ- ಬೆಂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ರೈತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಎಸ್ಪಿ ಭೇಟಿ ನೀಡಿ ರಸ್ತೆ ತಡೆ ನಡೆಸದಂತೆ ಮನವಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳ ಮನವಿಗೂ ಸ್ಪಂದಿಸಿದೇ ರೈತರು ರಸ್ತೆ ತಡೆಗೆ ಯತ್ನಿಸಿದ್ದಾರೆ.
ರಸ್ತೆ ತಡೆಗೆ ಮುಂದಾದ ನೂರಾರು ರೈತರನ್ನು ಖುದ್ದು ಎಸ್ಪಿ ನೇತೃತ್ವದಲ್ಲಿ ಬಂಧಿಸಿ ಬಸ್ಸುಗಳಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.
ಬಂಧಿತ ರೈತರನ್ನು ಪಟ್ಟಣದ ರಂಗನಾಥ ಸಮಯದಾಯ ಭವನಕ್ಕೆ ರವಾನಿಸಲಾಗಿದೆ. ಪೊಲೀಸರ ದೌರ್ಜನ್ಯಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.