Wednesday, March 4, 2026
Google search engine

Homeರಾಜಕೀಯಜನರನ್ನು ಕಛೇರಿಯಿಂದ ಕಛೇರಿಗೆ ಅಲೆಸದೆ ಸಮಸ್ಯೆ ಪರಿಹರಿಸಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ

ಜನರನ್ನು ಕಛೇರಿಯಿಂದ ಕಛೇರಿಗೆ ಅಲೆಸದೆ ಸಮಸ್ಯೆ ಪರಿಹರಿಸಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಅಧಿಕಾರಿಗಳು ಜನರನ್ನು ಕಛೇರಿಯಿಂದ ಕಛೇರಿಗೆ ಅಲೆಸದೆ ಕಾಲಮಿತಿಯೊಳಗೆ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಈ ಬಗ್ಗೆ ವರುಣಾ ಕ್ಷೇತ್ರದ ಶಿವಪುರ, ಹಾರೋಹಳ್ಳಿ, ಲಕ್ಷ್ಮೀಪುರ, ಹಳ್ಳಿಕೆರೆಹುಂಡಿ, ಮೆಲ್ಲಹಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳನ್ನು ಅಲ್ಲೇ ಇದ್ದು ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚಿಸಿ ಮಾತನಾಡಿದ ಅವರು, ವರುಣಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಅಭಿವೃದ್ಧಿ ಪಡಿಸಿದ್ದರೂ ಸಹ ಇನ್ನೂ ಸಮಸ್ಯೆಗಳು ಇವೆ. ಶಾಲಾ ಕಟ್ಟಡ ಕೇಳಿದ್ದೀರಿ, ಸ್ಮಶಾನಕ್ಕೆ ಜಾಗ, ರಸ್ತೆ, ವಿದ್ಯುತ್ ಕಂಬಗಳು, ಖಾತೆ ಮಾಡಿಸಿಕೊಡಿ ಎಂದು ಕೇಳಿದ್ದೀರಿ. ನಿಮ್ಮ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಿಕೊಡುತ್ತೇವೆ ಎಂದರು.

ಅಲ್ಲದೆ ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಜನರ ನೆಮ್ಮದಿಯಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಕೊಟ್ಟ ಆಶ್ವಾಸನೆಗಳನ್ನೆಲ್ಲಾ ಈಡೇರಿಸಿದೆ. ನಿಮ್ಮೆಲ್ಲರ ಆಶೀರ್ವಾದ ಮುಖ್ಯಮಂತ್ರಿಗಳು ಹಾಗೂ ನನ್ನ ಮೇಲಿರಲಿ ಎಂದರು.

ಈ ಸಂದರ್ಭದಲ್ಲಿ ಇಓ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‍ಕುಮಾರ್, ಮಹೇಶ್, ಮುಖಂಡರಾದ ರಾಯನಹುಂಡಿ ರವಿ, ದಕ್ಷಿಣಮೂರ್ತಿ, ಮಣಿಯಯ್ಯ, ಮೆಲ್ಲಹಳ್ಳಿ ನಾಗರಾಜ್, ಮಾರ್ಬಳ್ಳಿ ಕುಮಾರ್, ಆನಂದ್, ಎಂ.ಟಿ.ರವಿಕುಮಾರ್, ಜಿ.ಕೆ.ಬಸವಣ್ಣ, ಮೆಲ್ಲಹಳ್ಳಿ ರವಿಕುಮಾರ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular