ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರಿ ಸೇವೆ ಸಲ್ಲಿಸುವ ನೌಕರರು ವೃತ್ತಿಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಅಧಿಕಾರಿಗಳ ವೃತ್ತಿ ಗೌರವ ಹೆಚ್ಚಲಿದೆ ಎಂದು ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಹೇಳಿದರು.
ಕೆ.ಆರ್.ನಗರ ತಾಲೂಕಿನ ಕೆಗ್ಗರೆ ಗ್ರಾಮಪಂಚಾಯಿತಿಯಲ್ಲಿ ಪಿಡಿಓ ಅಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಚ್.ಆರ್. ಚಂದ್ರಶೇಖರ್ ಅವರಿಗೆ ಅವರ ಹೆಬ್ಬಾಳು ನಿವಾಸದಲ್ಲಿ ಅವರ ಹಿತೈಸಿಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಚಾರ ಇಲ್ಲದೇ ಜನರ ನೋವಿಗೆ ಸ್ಪಂದಿಸಿ ಸದಾ ಅಭಿವೃದ್ದಿ ಕೆಲಸಗಳನ್ನು ಮಾಡುವ ಅಧಿಕಾರಿಗಳು ಜನಮಾಸದಲ್ಲಿ ಉಳಿದು ಕೊಳ್ಳುತ್ತಾರೆ ಎಂದ ಅವರು ಈ ನಿಟ್ಟಿನಲ್ಲಿ ಚಂದ್ರಶೇಖರ್ ಅವರು ವೃತ್ತಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೊಸಕೋಟೆ ಅಶೋಕ್ ನಾಮದಾರಿ, ಹೊಸಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಸೋಮನಹಳ್ಳಿ ನೇತ್ರಾವತಿಪರಮೇಶ್, ಕುಪ್ಪೆ ಗ್ರಾ.ಪಂ.ಸದಸ್ಯ ಚಿಕ್ಕಕೊಪ್ಪಲು ಸಿ.ಬಿ.ಧರ್ಮ, ಸಾಲಿಗ್ರಾಮ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಕೃಷ್ಣ , ಹೊಸಕೋಟೆ ಕೊಪ್ಪಲು ಡೈರಿ ಉಪಾಧ್ಯಕ್ಷ ಜಾಕಿ ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.