Sunday, June 15, 2025
Google search engine

HomeUncategorizedರಾಷ್ಟ್ರೀಯವಿಮಾನ ದುರಂತದ ರಹಸ್ಯ ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಕ: ನಾಳೆಯೊಳಗೆ ಅಪಘಾತದ ಅಸಲಿ ಕಾರಣ ಪತ್ತೆಯಾಗುವ ಸಾಧ್ಯತೆ?

ವಿಮಾನ ದುರಂತದ ರಹಸ್ಯ ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಕ: ನಾಳೆಯೊಳಗೆ ಅಪಘಾತದ ಅಸಲಿ ಕಾರಣ ಪತ್ತೆಯಾಗುವ ಸಾಧ್ಯತೆ?

ಅಹಮದಾಬಾದ್ : ಅಹಮದಾಬಾದ್‌ನಲ್ಲಿ ನಡೆದಿರುವ ಭೀಕರ ವಿಮಾನ ದುರಂತದಿಂದ ಭಾರತದಲ್ಲಿ ದುಃಖದ ಛಾಯೆ ಹರಡಿದೆ. ಪ್ರಯಾಣಿಕರು ಮತ್ತು ಸ್ಥಳೀಯರು ಸೇರಿ 274 ಮಂದಿ ತಮ್ಮ ಪ್ರಾಣ ಕಳೆದುಕೊಂಡ ಈ ಭೀಕರ ಘಟನೆ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ಪತನಗಳಲ್ಲೊಂದು ಎನ್ನಲಾಗುತ್ತಿದೆ. ಈಗ ಈ ದುರಂತದ ನಿಜಾಂಶವನ್ನು ಅರಿಯುವ ಕೆಲಸ ತೀವ್ರ ಗತಿಯಲ್ಲಿದೆ.

ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ವಿಮಾನ ಪತನ ದುರಂತದ ತನಿಖೆ ಚುರುಕುಗೊಂಡಿದೆ. ಟೇಕಾಫ್ ಆದ 25 ಸೆಕೆಂಡ್‌ಗಳಲ್ಲಿ ಪತನಗೊಂಡ ಜಾಗದಲ್ಲೀಗ ಬ್ಲ್ಯಾಕ್‌ಬಾಕ್ಸ್ ಹಾಗೂ ಡಿವಿಆರ್ ಪತ್ತೆಯಾಗಿದ್ದು, ದುರಂತಕ್ಕೆ ಅಸಲಿ ಕಾರಣ ಗೊತ್ತಾಗಲಿದೆ. ಬ್ಲ್ಯಾಕ್‌ಬಾಕ್ಸ್ ಸಿಕ್ಕ 48 ಘಂಟೆಗಳಲ್ಲಿಯೇ ರಿಪೋರ್ಟ್ ಸಿಗಲಿದೆ.

ಬ್ಲ್ಯಾಕ್‌ಬಾಕ್ಸ್ನಲ್ಲಿ ಎರಡು ವಿಧ ಇರುತ್ತದೆ. ಒಂದು ಕಾಕ್ ಪಿಟ್‌ನಲ್ಲಿರುವ ಬ್ಲ್ಯಾಕ್‌ಬಾಕ್ಸ್. ಇನ್ನೊಂದು ಡೆಟಾ ರೆಕಾರ್ಡ್ ಬಾಕ್ಸ್. ಒಂದು ಕಾಕ್ ಪಿಟ್‌ನಲ್ಲಿ ಎಟಿಸಿ, ಪೈಲಟ್‌ನೊಂದಿಗಿನ ಸಂಭಾಷಣೆಯ ಆಡಿಯೋ ರೆಕಾರ್ಡ್ ಆಗಿರುತ್ತದೆ. ಮತ್ತೊಂದು ಫ್ಲೈಟ್ ಡೆಟಾ ರೆಕಾರ್ಡರ್. ಇದರಲ್ಲಿ ಇಂಜಿನ್‌ನ ಕ್ಷಮತೆ, ವೇಗ, ಎತ್ತರ ಇತರೆ ತಾಂತ್ರಿಕ ಸಮಸ್ಯೆಗಳು ಏನೇ ಇದ್ದರೂ ಫ್ಲೈಟ್ ಡೆಟಾ ರೆಕಾರ್ಡರ್‌ನಲ್ಲಿ ಸೆರೆಯಾಗಿರುತ್ತದೆ. ಈ ಬ್ಲ್ಯಾಕ್ ಬಾಕ್ಸ್ 1 ಸಾವಿರ ಡಿಗ್ರಿ ಉಷ್ಣಾಂಶವಿದ್ದರೂ ಇದಕ್ಕೆ ಹಾನಿಯಾಗಲ್ಲ. ಸಮುದ್ರದ ಆಳಕ್ಕೆ ಬಿದ್ದರೂ 30 ದಿನಗಳವರೆಗೆ ಏನು ಹಾನಿಯಾಗಲಾರದ ಹಾಗೆ ವಿನ್ಯಾಸ ಮಾಡಿರಲಾಗುತ್ತದೆ.

ಡಿಜಿಸಿಎ ಕೂಡ ತನಿಖೆಯನ್ನು ಚುರುಕುಗೊಳಿಸಿದ್ದು, ಇನ್ನೆರೆಡು ದಿನದಲ್ಲಿ ಈ ಅತಿದೊಡ್ಡ ದುರಂತಕ್ಕೆ ಕಾರಣ ಸಿಗಲಿದೆ.

RELATED ARTICLES
- Advertisment -
Google search engine

Most Popular