ಹುಣಸೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನಿರಂತರ ಸ್ಮರಣೆ ಮತ್ತು ಅನುಕರಣೆಯನ್ನು ಮಕ್ಕಳ ಮೂಲಕ ಅನಾವರಣ ಮಾಡಿಸಿದ್ದು ಅರ್ಥ ಪೂರ್ಣವಾಗಿತ್ತು ಎಂದು ರೋಟರಿ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ರೋಟರಿ ವಿದ್ಯಸಂಸ್ಥೆಯ ಮಕ್ಕಳಿಗಾಗಿ. 79 ರ ಸ್ವಾತಂತ್ರ್ಯ ಹೋರಾಟಗಾರ ಮಹನೀಯರ ದಿನದ ಅಂಗವಾಗಿ, ಶನಿವಾರ ಹಮ್ಮಿಕೊಂಡಿದ್ದ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್.ಕೆ.ಜಿ., ಯು.ಕೆ.ಜಿ. ರೋಟರಿ ವಿದ್ಯಾಸಂಸ್ಥೆಯ ಮಕ್ಕಳ ನೈಜ ಪ್ರತಿಭೆಯ ಅಭಿನಯ, ಡೈಲಾಗ್ ಸೊಗಸಾಗಿತ್ತು. ಹಾಗೆ ಅವರನ್ನು ಸಜ್ಜು ಗೊಳಿಸಿದ ಶಿಕ್ಷಕರು ಮತ್ತು ಪೋಷಕರ ಕಾರ್ಯ ಶ್ಲಾಘನೀಯವೆಂದರು.
ಮುಖ್ಯ ಶಿಕ್ಷಕ ಹರೀಶ್ ಎನ್.ಬಿ. ಮಾತನಾಡಿ, ಚಿಕ್ಕ ವಯಸ್ಸಿನಲ್ಲೆ ಮಕ್ಕಳ ಪ್ರತಿಭೆಯ ಕಲೆಯನ್ನು ಹೊರತರಲು ಇಂತಹ ವೇದಿಕೆಗಳು ಪೂರಕವಾಗಿದ್ದು, ಪೋಣಕರು ಮತ್ತು ರೋಟರಿ ಆಡಳಿತ ಮಂಡಳಿಯಿಂದ. ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ, ಶಿಕ್ಷಕಿಯರಾದ, ಸಮೀನಾ ಪರ್ವೀನ್, ಶೃತಿ. ಜೋಹರ, ಸುಭದ್ರ. ಕೃತಿಕ, ಆಶಾ, ಹಾಗೂ ಶ್ರೀನಿವಾಸ್ ಇದ್ದರು.