ಹುಣಸೂರು: ವೈದ್ಯೊ ನಾರಾಯಣ ಹರೀ ಎಂಬ ವೇದವಾಕ್ಯ ಇಂದು ಇಲ್ಲವಾಗಿದ್ದು ನಿಸ್ವಾರ್ಥ ಸೇವೇ ವೈದ್ಯರಿಗೆ ಮುಳುವಾಗಿದೆ ಎಂದು ಡಾ.ರವಿಕುಮಾರ್ ಕೆ.ಎಸ್ ತಿಳಿಸಿದರು
ನಗರದ ರೋಟರಿ ಭವನದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರ ಸೇವೇ ಅಂದಿಗೂ ಇಂದಿಗೂ ಅದೇ ಸೇವೆ ಆದರೆ ಸಮಾಜದಲ್ಲಿ ವ್ಯಾಪಾರಿಕರಣ ದಿಂದ ನಿತ್ಯ ಕೆಲಸ ಮಾಡುವ ವೈದ್ಯರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ವೈದ್ಯ ಲೋಕ ಮಿಕ್ಕಿದೆಲ್ಲಾ ಹುದ್ದೆ ಜವಾಬ್ದಾರಿಗಿಂತ ಅಮೂಲ್ಯವಾಗಿದ್ದು, ಸಮಾಜ ಒಳಿತಿಗೆ ನಾವೆಲ್ಲರೂ ಕಟಿಬದ್ದವಾಗಿ ಮನಸ್ಸು ಇಚ್ಚಾ ಕೆಲಸ ಮಾಡುವ ಪ್ರವೃತ್ತಿ ಬೆಳಸುಕೊಂಡಾಗ ಮಾತ್ರ ನಾವು ದಿನ ನಿತ್ಯದ ನೈಜ ಸಮಸ್ಯಗೆ ಜೀವ ತುಂಬಲು ಸಾಧ್ಯವೆಂದರು.
ರೋಟರಿ ನಿಯೋಜಿತ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ಇತ್ತೀಚಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದಿಂದ ಮನುಷ್ಯನ ಬದುಕು ಯಾಂತ್ರಿಕವಾಗಿದ್ದು ವೈದ್ಯರ ಸೇವೆ ಸಮಾಜಕ್ಕೆ ಅತ್ಯಾಮೂಲ್ಯವಾಗಿದ್ದು, ಎಲ್ಲಡೆ ಖಾಸಗಿ ಆಸ್ಪತ್ರೆಗಳ ಹೆಚ್ಚಳ ನಮ್ಮ ಕಣ್ಣ ಮುಂದಿದೆ ಎಂದರು.
ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಡಾ.ಸರೋಜಿನಿ ವಿಕ್ರಂ, ಡಾ.ರಘು, ಡಾ.ನಂದನ್, ಡಾ.ಸಂಗೀತಾ ರೊ.ಆನಂದ್, ರೊ.ರಾಜಶೇಖರ್, ರೊ.ಲೂಯಿಸ್ ಪೆರೇರಾ, ರೊ.ಮಂಜುನಾಥ್ ಹಾಗೂ ನಿಯೋಜಿತ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ ಇದ್ದರು.