Monday, November 3, 2025
Google search engine

Homeಕ್ರೀಡೆಚೊಚ್ಚಲ ವಿಶ್ವಕಪ್‌ ಗೆದ್ದ ವನಿತೆಯರಿಗೆ ಸಿಕ್ಕಿದ್ದು, ಬರೋಬ್ಬರಿ 90 ಕೋಟಿ ಬಹುಮಾನ..!

ಚೊಚ್ಚಲ ವಿಶ್ವಕಪ್‌ ಗೆದ್ದ ವನಿತೆಯರಿಗೆ ಸಿಕ್ಕಿದ್ದು, ಬರೋಬ್ಬರಿ 90 ಕೋಟಿ ಬಹುಮಾನ..!

ಮುಂಬೈ : 2025ನೇ ಸಾಲಿನಲ್ಲಿ ಚೊಚ್ಚಲ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲುವ ಮೂಲಕ ಭಾರತೀಯ ಮಹಿಳಾ ತಂಡ 47 ವರ್ಷಗಳ ಪ್ರಶಸ್ತಿ ಬರವನ್ನ ನೀಗಿಸಿಕೊಂಡಿದೆ. ಇದರೊಂದಿಗೆ 90 ಕೋಟಿ ರೂಪಾಯಿ ಬಹುಮಾನವನ್ನೂ ಬಾಚಿಕೊಂಡಿದೆ.

ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದ ವನಿತೆಯರು ಐಸಿಸಿಯಿಂದ ಕ್ರಿಕೆಟ್‌ ಇತಿಹಾಸದಲ್ಲೇ ಇದುವರೆಗಿನ ಅತ್ಯಧಿಕ ಬಹುಮಾನ 4.48 ಬಿಲಿಯತನ್‌ ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 39.78 ಕೋಟಿ ರೂ. ಬಾಚಿಕೊಂಡಿದೆ. ಇದರೊಂದಿಗೆ ಬಿಸಿಸಿಐ 51 ಕೋಟಿ ಮೊತ್ತದ ಬಹುಮಾನ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಟೀಂ ಇಂಡಿಯಾಕ್ಕೆ 90 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಬಹುಮಾನ ಸಿಗಲಿದೆ.

ಮಾಧ್ಯಮವೊಂದರಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಹುಮಾನದ ಮೊತ್ತವನ್ನ ಘೋಷಿಸಿದ್ದಾರೆ. ಐಸಿಸಿ ಅಧ್ಯಕ್ಷ ಜಯ್‌ ಶಾ ಮಹಿಳಾ ಪ್ರಶಸ್ತಿಯ ಹಣವನ್ನ 300%ಗೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

2019ರಲ್ಲಿ ಜಯ್‌ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಾಗ ಕ್ರಿಕೆಟ್‌ನಲ್ಲಿ ಹಲವು ಬದಲಾವಣೆ ತಂದರು. ಸಮಾನ ವೇತನ ನೀತಿಯನ್ನು ಅನುಷ್ಠಾನಗೊಳಿಸಿದ್ರು. ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಹಿಳಾ ವಿಶ್ವಕಪ್‌ ಬಹುಮಾನ ಮೊತ್ತವನ್ನ 300% ಹೆಚ್ಚಿಸಿದ್ರು. ಈ ಮೊದಲು ಮಹಿಳಾ ವಿಶ್ವಕಪ್‌ ಬಹುಮಾನದ ಮೊತ್ತ 2.88 ಮಿಲಿಯನ್‌ ಡಾಲರ್‌ (ಸುಮಾರು 20.22 ಕೋಟಿ ರೂ.) ಅಷ್ಟೇ ಆಗಿತ್ತು.

ಈಗ ಅದನ್ನು 14 ಮಿಲಿಯನ್‌ ಡಾಲರ್‌ಗೆ ಏರಿಸಿದ್ದಾರೆ. ಈ ಎಲ್ಲಾ ಕ್ರಮಗಳು ಮಹಿಳಾ ಕ್ರಿಕೆಟ್‌ ಅನ್ನು ಬಹಳಷ್ಟು ಉತ್ತೇಜಿಸಿವೆ. ಹೀಗಾಗಿ ಬಿಸಿಸಿಐ ಇಡೀ ತಂಡದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ 51 ಕೋಟಿ ರೂ. ಬಹುಮಾನ ಘೋಷಿಸುತ್ತಿದೆ ಎಂದು ಸೈಕಿಯಾ ತಿಳಿಸಿದ್ದಾರೆ.


RELATED ARTICLES
- Advertisment -
Google search engine

Most Popular