Tuesday, December 23, 2025
Google search engine

Homeಅಪರಾಧಪಾರ್ಕ್ ಮಾಡಿದ್ದ ಆಂಬ್ಯುಲೆನ್ಸ್ ಕಳ್ಳತನ; ವ್ಯಕ್ತಿ ಅರೆಸ್ಟ್

ಪಾರ್ಕ್ ಮಾಡಿದ್ದ ಆಂಬ್ಯುಲೆನ್ಸ್ ಕಳ್ಳತನ; ವ್ಯಕ್ತಿ ಅರೆಸ್ಟ್

ಪಾರ್ಕ್ ಮಾಡಿದ್ದ ಆಂಬ್ಯುಲೆನ್ಸನ್ನು ಕಳ್ಳತನ ಮಾಡಿದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಶೋಧನ್, ಬಂಧಿತರು. ದೂರುದಾರರಾದ ಶಿರಾಡಿ ನಿವಾಸಿ ಸುರೇಶ್ ಎಂಬವರು ನೀಡಿದ ದೂರಿನಂತೆ  ಆಂಬ್ಯುಲೆನ್ಸ್‌ ಚಾಲಕರಾಗಿದ್ದು, ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ ಲಾಕ್‌ ಮಾಡಿ ಮನೆಗೆ ಹೋಗುತ್ತಿದ್ದರು. ಅದರಂತೆ ದಿನಾಂಕ: 19.12.2025 ರಂದು ರಾತ್ರಿ ಕೂಡಾ ಗುಂಡ್ಯ ಚೆಕ್‌ ಪೋಸ್ಟ್‌ ಬಳಿ ನಿಲ್ಲಿಸಿ, ಅಪಘಾತದ ಬಗ್ಗೆ ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಅಂಬ್ಯಲೆನ್ದ್‌  ಕೀಯನ್ನು ಅಂಬ್ಯುಲೆನ್ದ್‌ನಲ್ಲಿ ಇಟ್ಟು ಹೋಗಿರುತ್ತಾರೆ. ಮರುದಿನ ದಿನಾಂಕ: 20.12.2025 ರಂದು ಬೆಳಿಗ್ಗೆ, ಮನೆಯಿಂದ ಬಂದು  ಅಂಬ್ಯುಲೆನ್ಸ್‌  ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಅಂಬ್ಯುಲೆನ್ಸ್‌ ಕಳವಾಗಿತ್ತು. 

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:  117/2025 ಕಲಂ: 303(2)  ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ದಿನಾಂಕ: 20.12.2025ರಂದು ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಆರೋಪಿ ಉಡುಪಿ ಕಾರ್ಕಳ ನಿವಾಸಿ ಶೋದನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೈನ್ಸ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular