Tuesday, November 4, 2025
Google search engine

Homeರಾಜಕೀಯರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೆ ಇದೆ: ಸಚಿವ ಸತೀಶ್.

ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೆ ಇದೆ: ಸಚಿವ ಸತೀಶ್.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೇ ಇದೆ ಅದು ಇಲ್ಲದೆ ಸಂಘಟನೆ ಮಾಡಲು ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಾಕತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಪಕ್ಷ ತೀರ್ಮಾನ ಮಾಡಬೇಕು ಎಂದರು‌.
ಯತೀಂದ್ರ ಹೇಳಿರುವುದು ವೈಯಕ್ತಿಕ ಹೇಳಿಕೆ. ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಆಗಲ್ಲ ಎಂದರು.
ಡಿಸೆಂಬರ್ ನಲ್ಲಿ ಕ್ರಾಂತಿ ನಮಗೆ ಗೊತ್ತೇ ಇಲ್ಲ. ಸಿದ್ದರಾಮಯ್ಯನವರ ನಂತರ ಪಕ್ಷ ನಡೆಸುವ ವಿಚಾರ ಎಲ್ಲವನ್ನೂ ಕಾದು ನೋಡೋಣ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ವೈಯಕ್ತಿಕ ನಿರ್ಧಾರ ಹೇಳಿದ್ದಾರೆ.ಅಂತಿಮವಾಗಿ ಯಾರು ನಾಯಕ ಅಂತಾ ಪಕ್ಷ ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ ಅಂತಿಮವಾಗಿ ಪಕ್ಷವೆ ನಿರ್ಧಾರ ಮಾಡಬೇಕು ಎಂದರು.

RELATED ARTICLES
- Advertisment -
Google search engine

Most Popular