ಬೆಂಗಳೂರು: ಅಕ್ಟೋಬರ್ 13 ರಂದು ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಔತಣ ಕೂಟ ಏರ್ಪಡಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಈ ಹಿಂದೆಯೂ ಆನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಕರೆದಿದ್ದಾರೆ. ಸಿಎಂ ಡಿನ್ನರ್ ಕರೆಯುವುದಕ್ಕೆ ಯಾವುದೇ ವಿಶೇಷತೆ ಇಲ್ಲ.
ಊಟ ಹಾಕ್ತಾರೆ ನಾವು ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೇಂಡಾ ಊಟ ಅಷ್ಟೆ . ಸಿಎಂ ಊಟಕ್ಕೆ ಕರೆದಿರುವುದು ಒಂದು ಸಾಮಾನ್ಯ ಸಭೆ ಅಷ್ಟೆ ಎಂದು ಪರಮೇಶ್ವರ್ ತಿಳಿಸಿದರು.