ಶ್ರೀರಂಗಪಟ್ಟಣ: ನಾಳೆ ದೆಹಲಿಯಲ್ಲಿ ನಾವು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡ್ತಾ ಇದೀವಿ. ಇಷ್ಟು ಜನ ಸಂಸದರು ಇಟ್ಟುಕೊಂಡು ಪ್ರತಿಭಟನೆ ಮಾಡುವ ಸ್ಥಿತಿ ನಮಗೆ ಬಂದಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಬೇಸರಿಸಿದರು.
ಗ್ಯಾರಂಟಿ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದ ಹಿಂದೆ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ ಸೋತ್ತಿದ್ದೋ. ಆಗ ಗೆದ್ದ ಜೆಡಿಎಸ್ ಅವರನ್ನು ಸರಪಳಿ ಹಾಕಿದ್ರು ಹಿಡಿಯೋಕೆ ಆಗಿರಲಿಲ್ಲ. ಅವರ ಆರ್ಭಟಗಳನ್ನು ನೋಡೋಕೆ ಆಗುತ್ತಿರಲಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳ ರೀತಿ ಬಿಜೆಪಿ, ಜೆಡಿಎಸ್ ಅವರು ಮಾಡಲಿಲ್ಲ ಎಂದರು.
ನಮ್ಮ ಮಾತನ್ನು ಉಳಿಸಿಕೊಂಡು ಜನರಿಗೆ ಯೋಜನೆಗಳನ್ನು ತಲುಪಿಸುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಭಾಷಣ ಮಾಡಿಕೊಂಡು ಸುಳ್ಳು ಹೇಳಿಕೊಂಡು ಇರಬಹುದಿತ್ತು. ಈ ಇದ್ದ ಮಂಡ್ಯ ನಾಯಕರು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ಗೊತ್ತಿದೆ.
ನಮ್ಮ ಸೇವೆಯನ್ನು ಜನರು ಗುರುತಿಸುತ್ತಿದ್ದಾರಾ ಎಂದು ಕೆಲವರಿಗೆ ಪ್ರಶ್ನೆ ಮಾಡಿದ್ದೆ. ಆಗ ಜನರಿಗೆ ನಮ್ಮ ಶ್ರಮ ಗೊತ್ತಾಗುತ್ತಿದೆ ಎಂದು ಹೇಳ್ತಾ ಇದ್ದಾರೆ. ಜನರು ನಾವು ಮಾಡೋ ಸೇವೆಯನ್ನು ಗುರುತಿಸಬೇಕು. ಮಂಡ್ಯ ಜಿಲ್ಲೆ ಕಳೆದ ಐದು ವರ್ಷ ಹೇಗೆ ಇತ್ತು. 7 ಮಂದಿ ಜೆಡಿಎಸ್ ಶಾಸಕರು ಏನು ಸೌಲಭ್ಯ ಕೊಟ್ಟಿದ್ದಾರೆ. ಕೇಂದ್ರದಲ್ಲಿ ಕೂತು ನರೇಂದ್ರ ಮೋದಿ ಅವರು ಸುಳ್ಳು ಹೇಳ್ತಾರೆ. ಇಲ್ಲಿ ಇವರು ಜಾಗಟೆ ತಗೊಂಡು ಬಾರಿಸುತ್ತಾರೆ. ರಾಜ್ಯದ ಎಂಪಿಗಳಿಗೆ ನಾಚಿಕೆ ಆಗುತ್ತಿಲ್ವಾ. ಜನರಿಗೆ ಮೋಸ ಮಾಡ್ತಾ ಇದೀವಿ ಎಂದು ಅನಿಸುತಿಲ್ವಾ. ಇಲ್ಲಿಯವರಗೆ ಕೇಂದ್ರ ಸರ್ಕಾರ ಬರಗಾಲದ ಪರಿಹಾರ ನೀಡಿಲ್ಲ. ಇದಕ್ಕೆ ಮುಂದಿನ ದಿನ ಜನರು ಉತ್ತರ ನೀಡಬೇಕು. ಕೇಂದ್ರ ಕೊಡೋದನ್ನುನ ಕಾಯದೇ 2 ಸಾವಿರವನ್ನು ಬಿಡುಗಡೆ ಮಾಡಿದ್ದೇವೆ.ಸ್ವಾತಂತ್ರ್ಯ ಬಂದ ನಂತರ ಯಾರು ನಮ್ಮ ರೀತಿ ಗ್ಯಾರಂಟಿ ಯೋಜನೆ ನೀಡಿಲ್ಲ ಎಂದು ಕಿಡಿಕಾರಿದರು.
ಆ ಯೋಜನೆಗಳನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ. ನಮ್ಮದೇ ಬೆಂಬಲ ತೆಗದುಕೊಂಡು ಸಿಎಂ ಆದ ಕುಮಾರಸ್ವಾಮಿ ಈ ರೀತಿ ಅಭಿವೃದ್ಧಿಗೆ ಗಮನ ಕೊಡಲಿಲ್ಲ. ರಾಜ್ಯದಲ್ಲಿ ಜನರಿಗಾಗಿ ಯೋಜನೆ ಕೊಡಲು ಏನು ಕೊರತೆ ಇಲ್ಲ. ನಾಳೆ ಚುನಾವಣೆ ಬಂದಾಗ ಬಿಜೆಪಿ, ಜೆಡಿಎಸ್ ಅವರು ಬಂದು ಸುಳ್ಳು ಹೇಳ್ತಾರೆ.ಕಾವೇರಿ ವಿಚಾರದಲ್ಲಿ ಒಂದು ಬೆಳೆ ಒಣಗಲು ನಾವು ಬಿಟ್ಟಿಲ್ಲ. ಇಲ್ಲಸಲ್ಲದ ಸುಳ್ಳು ಹೇಳಿಕೊಂಡು ಬಂದವರಿಗೆ ಬುದ್ಧಿ ಕಲಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ಜನ ನಮಗೆ ವಾಸ್ತವ ಬೇಕು ಎಂದು ಬಿಜೆಪಿ, ಜೆಡಿಎಸ್ ಗೆ ಬುದ್ಧಿ ಕಲಿಸಬೇಕು. ಮುಂದಿನ ಚುನಾವಣೆಯಲ್ಲಿ ಕೈ ಹಿಡಿದರೆ ನಿಮ್ಮ ಪಾದಗಳಿಗೆ ನಮಿಸುತ್ತಾ ಕೆಲಸ ಮಾಡ್ತೀವಿ ಎಂದರು.