Saturday, May 24, 2025
Google search engine

Homeರಾಜಕೀಯದೇವರ ಹೆಸರು, ಧರ್ಮದ ಹೆಸರಲ್ಲಿ ಒಡೆಯುವ ಕೆಲಸ ಮಾಡ್ತಿದ್ದಾರೆ: ನರೇಂದ್ರ ಸ್ವಾಮಿ

ದೇವರ ಹೆಸರು, ಧರ್ಮದ ಹೆಸರಲ್ಲಿ ಒಡೆಯುವ ಕೆಲಸ ಮಾಡ್ತಿದ್ದಾರೆ: ನರೇಂದ್ರ ಸ್ವಾಮಿ

ಶ್ರೀರಂಗಪಟ್ಟಣ: ದೇವರ ಹೆಸರು, ಧರ್ಮದ ಹೆಸರಲ್ಲಿ ಒಡೆಯುವ ಕೆಲಸ ಮಾಡ್ತಿದ್ದಾರೆ. ಮುಂದೆ ಮಂಡ್ಯದ ಒಗ್ಗಟ್ಟನ್ನು ಪ್ರದರ್ಶಿಸೋಣಾ ಎಂದು ಶಾಸಕ ನರೇಂದ್ರ ಸ್ವಾಮಿ ತಿಳಿಸಿದರು.

ಶ್ರೀರಂಗಪಟ್ಟಣದಲ್ಲಿಂದು ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ರಾಜ ಗುರು ಅಂದ್ರೆ ರಮೇಶ್ ಬಾಬು ಬಂಡಿಸಿದ್ದೇಗೌಡ ಎಂದು ರಮೇಶ್ ಬಾಬು ಬಂಡಿಸಿದ್ದೇಗೌಡರನ್ನ ಹೊಗಳುತ್ತಾ ಭಾಷಣ ಪ್ರಾರಂಬಿಸಿದರು.

ರಾಜ್ಯದಲ್ಲಿ ನಮ್ಮ ಪಕ್ಷಕ್ಕಾಗಿ ದುಡಿಯುತ್ತಿರುವುದು ನಮ್ಮ ಚಲುವರಾಯಸ್ವಾಮಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ ಎಂದರು.

ಈ ಯೋಜನೆಯನ್ನ ಬೇರೆ ಪಕ್ಷದವರು ಸುಳ್ಳು ಹೇಳಿದ್ರು. 8 ಸಾವಿರ ಕೋಟಿ ಕೊಡ್ತೇವೆ ಅಂದವರು ಒಂದು ಕರೆ ಮತ್ತೊಂದು ಕಡೆ 15 ಸಾವಿರ ಕೊಡ್ತಿನಿ ಇನ್ನೊಂದು ಕಡೆ. ರೋಡ್ ಶೋ ಮಾಡಿದ್ದು ಏನೋ. ಉದ್ಯೋಗ ಕ್ರಾಂತಿ ಕೊಟ್ಟವರು ರಾಜೀವ್ ಗಾಂಧಿ. ಉಳುವವನೆ ಭೂಮಿ ಒಡೆಯ ಕೊಟ್ಟಿದ್ದು ಇಂದಿರಾಗಾಂಧಿ ಅವರು. ಬಿಜೆಪಿ ಇವತ್ತು 114 ಲಕ್ಷ ಕೋಟಿ ಸಾಲ ಕೊಟ್ಟಿದ್ದಾರೆ. ಗಂಡು ಮೆಟ್ಟಿನ ನಾಡಿನಲ್ಲಿ ವಿಷ ಬೀಜ ಬಿತ್ತಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಧರ್ಮದ ಆಧಾರದ ಮೇಲೆ ನಾವು ಕಿತ್ತಾಡಿಲ್ಲ. ನಾವೆಲ್ಲರೂ ಒಂದೇ ರೀತಿ ಬದುಕುತ್ತಿದ್ದೇವೆ. ಬಿಜೆಪಿ ತೆಗಳುತ್ತಿದ್ದವರು ಬಿಜೆಪಿ ಜೊತೆ ಸಂಬಂಧ ಬೆಳೆಸಿದ್ದಾರೆ. ಕಳ್ಳ, ಕಾಕರು ಇದ್ದಾರೆ ಎಚ್ಚರಿಕೆ ವಹಿಸಿ. ಇವರ ಯೋಗ್ಯತೆಗೆ ನಾಲೆ ಅಭಿವೃದ್ಧಿ ಮಾಡಿಲ್ಲ. ಮಂಡ್ಯ ಜಿಲ್ಲೆಗೆ ಬಂದು ಮೊಸಳೆ ಕಣ್ಣಿರು ಹಾಕ್ತಾರೆ ಎಂದು ಹರಿಹಾಯ್ದರು.

RELATED ARTICLES
- Advertisment -
Google search engine

Most Popular