Saturday, May 24, 2025
Google search engine

Homeರಾಜಕೀಯಷಡ್ಯಂತ್ರ ಮಾಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ: ಶಾಸಕ ಜಿ.ಟಿ ದೇವೇಗೌಡ ಕಿಡಿ

ಷಡ್ಯಂತ್ರ ಮಾಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ: ಶಾಸಕ ಜಿ.ಟಿ ದೇವೇಗೌಡ ಕಿಡಿ

ಬೆಂಗಳೂರು : ಷಡ್ಯಂತ್ರ ಮಾಡಿ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರನ್ನು ಜೈಲಿಗೆ ಕಳಿಸಿದ್ದಾರೆ. ಎಸ್‌ಐಟಿ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡಲು ತೀರ್ಮಾನಿಸಿದ್ದೇವೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ ತಿಳಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವದಲ್ಲಿ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಗುರುವಾರ ಕೋರ್ ಕಮಿಟಿ ಸಭೆ ಕರೆದಿದ್ದೇವೆ. ಹಾಲಿ ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಪ್ರಜ್ವಲ್ ಪ್ರಕರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ಎಸ್‌ಐಟಿ ತನಿಖೆಗೆ ಕುಮಾರಸ್ವಾಮಿ ಸ್ವಾಗತ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಅಂತ ಹೇಳಿದ್ದೇವೆ. ಈಗಾಗಲೇ ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೇವೆ ಎಂದರು.

ಕಿಡ್ನಾಪ್ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಆಗುತ್ತಿದೆ. ಕಾರ್ತಿಕ್ ಪೆನ್ ಡ್ರೈವ್ ಕೊಟ್ಟಿದ್ದಾರೆಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ. ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಡಿಸಿಎಂ ಡಿ. ಕೆ ಶಿವಕುಮಾರ್ ಸಹ ದೇವರಾಜೇಗೌಡರ ಜೊತೆ ಮಾತಾಡಿರುವುದು ವಿಡಿಯೋ ಇದೆ. ದೇವರಾಜೇಗೌಡ ಮೂಲಕ ಡಿ. ಕೆ ಶಿವಕುಮಾರ್ ಮಾಡಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಪತ್ರಿದಿನ ಆದೇಶ ನೀಡುತ್ತಿದ್ದಾರೆ. ಆ ಆದೇಶದಂತೆ ಎಸ್‌ಐಟಿ ತನಿಖೆ ಮಾಡ್ತಾ ಇದೆ. ಅದಕ್ಕೆ ಸಿಬಿಐ ತನಿಖೆಗೆ ನಾವು ಆಗ್ರಹಿಸುತ್ತೇವೆ ಎಂದರು.

ಪೆನ್ ಡ್ರೈವ್ ಹಂಚಿ ಪ್ರಧಾನಿ ಮೋದಿ ಹೆಸರು ಹೇಳ್ತೀರಾ?. ನಿಮ್ಮ ಜೊತೆ ಎಷ್ಟು ಎಂಎಲ್‌ಎಗಳು ಇದ್ದಾರೆ. ನಾವು ಪ್ರಜ್ವಲ್ ರೇವಣ್ಣ ಪರ ಹೋರಾಟ ಮಾಡಿಲ್ಲ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಪೆನ್ ಡ್ರೈವ್ ಹಂಚಿರುವ ಆರೋಪಿ ಕಾರ್ತಿಕ್ ನನ್ನು ಮುಚ್ಚಿಡುವ ಕೆಲಸ ಮಾಡಿದ್ದೀವಾ ಎಂದು ಜಿಟಿಡಿ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular