Sunday, March 8, 2026
Google search engine

Homeರಾಜ್ಯಸುದ್ದಿಜಾಲಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು.

ಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು.

ವರದಿ :ಸ್ಟೀಫನ್ ಜೇಮ್ಸ್.

ಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು

ತಿಲಕವಾಡಿ ಪೊಲೀಸರ ಕಾರ್ಯಾಚರಣೆ ಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ.

ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆ ಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ

ಬೆಳಗಾವಿ:

ನಗರದ ತಿಲಕವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಸ್ಟಲ್‌ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್‌ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ (33) ಎಂದು ಗುರುತಿಸಲಾಗಿದೆ. ಇವಳು ಮೂಲತಃ ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರ ನಿವಾಸಿಯಾಗಿದ್ದು, ಪ್ರಸ್ತುತ ಸಂಕೇಶ್ವರದಲ್ಲಿ ವಾಸಿಸುತ್ತಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸರ ತನಿಖೆಯ ವೇಳೆ ಆರೋಪಿತಳಿಂದ 11 ಮೊಬೈಲ್ ಫೋನ್‌ಗಳು, ಸ್ಯಾಮಸಂಗ್ ಕಂಪನಿಯ ಟ್ಯಾಬ್, ಏರ್‌ಟೆಲ್‌ ಮೈ-ವೈಫೈ ಡೊಂಗಲ್, ಮೂರು ಕಾರಿನ ಕೀಗಳು, ನಗದು ಹಣ, ಕಾರುಗಳು ಹಾಗೂ ವಿವಿಧ ದಾಖಲೆಗಳು ಸೇರಿದಂತೆ ಒಟ್ಟು ₹32,86,000 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

ಜಪ್ತಗೊಂಡ ವಾಹನಗಳಲ್ಲಿ ಬಿಳಿ ಬಣ್ಣದ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು ಸೇರಿದಂತೆ ಮತ್ತೊಂದು ವಾಹನ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿತನಾದ ಶಿವಾನಂದ @ ವಿನೋದ ಶಂಕರಯ್ಯ ಮಠಪತಿ, ಶಂಕರನಗರ (ಸಂಕೇಶ್ವರ) ನಿವಾಸಿ, ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಟಿಳಕವಾಡಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪರಶುರಾಮ ಪೂಜೇರಿ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ಘಂಟಾಮಠ, ಪ್ರಭಾಕರ ಡೊಳ್ಳಿ ಹಾಗೂ ಸಿಬ್ಬಂದಿಗಳಾದ ಮಹೇಶ್ ಪಾಟೀಲ, ಕರಲಿಂಗಣ್ಣವರ, ನಾಗೇಂದ್ರ ತಳವಾರ, ಸತೀಶ ಗಿರಿ, ಲಾಡಜಿಸಾಬ ಮುಲ್ತಾನಿ, ಗಂಗವ್ವ ಪಾರ್ವತಿ ರಮೇಶ್ ಅಕ್ಕಿ, ಮಹಾದೇವ ಖಾಸೀದ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡದ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರ ಪೊಲೀಸ್‌ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

RELATED ARTICLES
- Advertisment -
Google search engine

Most Popular