ಮಂಗಳೂರು (ದಕ್ಷಿಣ ಕನ್ನಡ) : ರಾಜ್ಯದಲ್ಲಿ ನಡಿತಾ ಇರೋದು ಜಾತಿಗಣತಿ ಅಲ್ಲ. ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ. ಈ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಸೆ.21ರ ರವಿವಾರ ಮಂಗಳೂರಿನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಮೊದಲಾದವುಗಳು ಹಿಂದಿನ ಆಯೋಗಗಳು ಸಮೀಕ್ಷೆ ಮಾಡಿದಾಗ ಜನರೇ ಹೇಳಿರುವುದು. ಆಯೋಗ ಅಥವಾ ಸರಕಾರ ಸೃಷ್ಟಿ ಮಾಡಿರುವುದಲ್ಲ ಎಂದು ತಿಳಿಸಿದರು.
ಹಿಂದಿನ ಸಮೀಕ್ಷೆಗಳಲ್ಲಿ ಜನ ಏನು ಹೇಳಿದ್ದಾರೆ ಅದನ್ನು ಅವರು ಬರೆದುಕೊಂಡಿದ್ದಾರೆ. ಆದರೆ ಈ ರೀತಿ ಬರಬಾರದು ಎಂದು ನಾನು ಸಚಿವರಿಗೆ ಪತ್ರ ಬರೆದಿದ್ದೇನೆ ಅಷ್ಟೇ. ಇದೊಂದು ದೊಡ್ಡ ಗಂಭೀರ ವಿಚಾರವಲ್ಲ ಎಂದರು.
ಆಯೋಗ ತಯಾರಿಸಿರುವ ಈ ಪಟ್ಟಿ ಬಿಜೆಪಿ ಸರಕಾರ ಇದ್ದಾಗಲೂ ಇತ್ತು. ಬಹಳಷ್ಟು ಜನರಿಗೆ ಪೂರ್ತಿ ಮಾಹಿತಿಯಿಲ್ಲದೆ ಗೊಂದಲ ಸೃಷ್ಟಿಯಾಗಿದೆ. ಗೊಂದಲ ಇರಬಾರದು ಎಂದು ನಾನು ಹೇಳುತ್ತಿದ್ದೇನೆ ಎಂದ ಅವರು, ಸಮೀಕ್ಷೆ ಸರಿಯಾದ ರೀತಿಯಲ್ಲಿ ಆಗುತ್ತದೆ. ಆಗಬೇಕು, ನಮ್ಮ ಪೂರ್ತಿ ಬೆಂಬಲ ಸಮೀಕ್ಷೆಗೆ ಇದೆ ಎಂದರು.
– ದಿನೇಶ್ ಗುಂಡೂರಾವ್, ಸಚಿವರು